ಬದುಕಿನ ಉದ್ದಕ್ಕೂ ಒಂಟಿ

ಹುಟ್ಟುವಾಗ ಒಂಟಿ
ಸಾಯುವಾಗ ಒಂಟಿ
ಬದುಕಿನ ಉದ್ದಕ್ಕೂ ಒಂಟಿ!!

ಬಂಧು ಬಳಗವೆಲ್ಲ
ದೂರ ಸರಿದ ಮೇಲೆ
ಬದುಕಿನ ಉದ್ದಕ್ಕೂ ಒಂಟಿ!!

ಕಣ್ಣು ಇದ್ದರೂ ಜಗವು
ಕುರುಡಾಗಿ ಇರುವಾಗ
ಬದುಕಿನ ಉದ್ದಕ್ಕೂ ಒಂಟಿ!!

ನಾನು ನನ್ನದು ಎಂಬ
ಮೋಹವನು ತೊರೆದಾಗ
ಬದುಕಿನ ಉದ್ದಕ್ಕೂ ಒಂಟಿ!!

ಹುಟ್ಟು ಪುಣ್ಯ ಸಾವು ಧನ್ಯ
ಎಂದು‌ ಅರಿತ ಮೇಲೆ
ಬದುಕಿನ ಉದ್ದಕ್ಕೂ ಒಂಟಿ!!

- ಪಿ.ಜಿ.ಜ್ಯೋತಿ

15 Nov 2018, 05:03 pm
Download App from Playstore: