ಸ್ವಲ್ಪ ಹರಯ ಸಾಲದಾಗಿದೆ
ಸುಳಿವಿಲ್ಲದೆ ಹೇಗೆ?
ನುಸುಳಿ ಬಂತೋ ಒಲವಮಾಸ
ಬದುಕುಬಯಲೋಳಗೆ
ನಿತ್ಯ ವಸಂತ.!
ಮುಗಿಲಿಲ್ಲದೆ ಹೇಗೆ?
ಸುರಿಯಿತೋ ಸ್ವಾತಿ
ಎದೆಯ ಚಿಪ್ಪಿನೊಳಗೆ ಅಗಣಿತ
ಮುತ್ತುಗಳಿನ್ನು ಜೀವಂತ.!
ಕಣ್ಣಕೊಳದೊಳಗೆ
ನೀ ಹೇಗೆ ಇಳಿದೆ?
ಕಂಡ ಕಂಡ ಕನಸ್ಸುಗಳೆಲ್ಲ
ಕಾಮನಬಿಲ್ಲು.!
ಯಾವ ಮಾಮರದ ಚಿಗುರು
ಸವಿಯಬೇಕು
ಗಡುಸಗುತ್ತಿದೆ ಸೊಲ್ಲು.!
ಸರ್ರನೆ ಬರುವ ಕಾಲವೆ
ನೀ ಬೇಗನೆ ಬಾರದಿರು
ಸ್ವಲ್ಪ ಹರಯ ಸಾಲದಾಗಿದೆ.!
ಅರಿಯದೆ ಬಂದ ಹರಯ
ಏನೋ..! ಒಂಥಾರ ಹಾಯಾಗಿದೆ.!
●○ ಯನವೆ....
- Venkatesh N.
16 Nov 2018, 12:51 pm
Download App from Playstore: