ಮೌನದ ಮಡಿಲಿನಲಿ
ಮೌನದ ಮಡಿಲಿನಲಿ
ಮಾತಿಗೆ ಮರಣ ಶಯೈಯ
ಜೋ ಜೋ ಲಾಲಿ
ಮಾತಿರದೆ ಮಾತಾಗದೆ
ಅಳಿಯದುಳಿದ ಭಾವಗಳಿಗೆಲ್ಲ
ಮೌನದ ಜೋ ಜೋ ಲಾಲಿ
ಹೊರಬರದೆ ಹೊರೆಯಾದ
ನೋವಿನ ಮನಕೆ
ತಳಮಳದ ಜೋ ಜೋ ಲಾಲಿ
ಕೊನೆಯಿರದ ಚಿರಾಯುವೆಂದು
ಬೀಗುವ ಕಳವಳಕೆ ಬೇಕಿದೆ
ಬದುಕುಳಿವ ಮಾತಿನ ಜೋ ಜೋ ಲಾಲಿ
- ಶ್ರೀಕಾವ್ಯ
17 Nov 2018, 08:02 pm
Download App from Playstore: