ಅವಳಿಲ್ಲದ ಈ ಕವಿತೆ

ಬಣ್ಣದ ಬದುಕು
ಘಾಸಿಗೊಂಡು ನಿಂತಾಗ
ಗೊತ್ತಿಲ್ಲದೇ ಉದಯಿಸಿದ್ದು
ಅವಳಿಲ್ಲದ ಈ ಕವಿತೆ.
ಚಿನ್ನದ ಗೊಂಬೆ
ಕೈಗೆ ಸಿಗದಾದಾಗ
ಜೋತೆಯಾಗಿ ನಿಂತದ್ದು
ಅವಳಿಲ್ಲದ ಈ ಕವಿತೆ.
ಹುಣ್ಣಿಮೆಯ ಚಂದಿರನು
ನನ್ನಿಂದ ದೂರ ಸರಿದಾಗ
ಬೆಳದಿಂಗಳಾಗಿ ಬಂದದ್ದು
ಅವಳಿಲ್ಲದ ಈ ಕವಿತೆ.
ಕಾಣದ ಕೈಗಳು
ಕತ್ತು ಹಿಸುಕುತ್ತಿದ್ದಾಗ
ಕಸುವ ನೀಡಿದ್ದು
ಅವಳಿಲ್ಲದ ಈ ಕವಿತೆ.
ಕಣ್ಣೀರ ಹನಿ ಕೂಡ
ನನ್ನ ಕೈ ಬಿಟ್ಟು ಹೊಂಟಾಗ
ಸಾವರಿಸಿ ಮತ್ತೆ ಹುರಿದುಂಬಿಸಿದ್ದು
ಅವಳಿಲ್ಲದ ನನ್ನ ಈ ಕವಿತೆ.

ಇಂತಿ ಸ್ನೇಹ ಸಿಂಚನ

- vasu

18 Nov 2018, 11:58 am
Download App from Playstore: