ನಾನಿನ್ನೂ ಜೀವ ಹಿಡಿದಿರುವೆ.

ನೂವುಗಳ ಸಾಲಿನಲ್ಲಿ
ಸತ್ತು ಬದುಕುತ್ತಿರುವೆ.
ನೆತ್ತರದ ಹನಿ ಸುರಿಸಿ
ಕತ್ತಲಿನ ಕೋಣೆಯಲ್ಲಿರುವೆ.
ಒಂದಲ್ಲ ಒಂದು ದಿನ
ನೀ ಬೆಳಕಾಗಿ ಬರುವೆ ಎಂದು.!

ನಿನ್ನ ನಲಿವಿನಲ್ಲಿ
ನಾ ಸ್ವರ್ಗ ಕಂಡಿರುವೆ.
ಅಂದದ ಅರಮನೆಯ ಕಟ್ಟಿ
ಒಬ್ಬನೇ ನಾನಿಲ್ಲಿ ಕೂತಿರುವೆ.
ಒಂದಲ್ಲ ಒಂದು ದಿನ
ನೀ ಬಂದೇ ಬರುವೆ ಎಂದು.!

ತಲ್ಲಣಗೊಂಡಿರುವ ನನ್ನೀ
ಮನಸ್ಸಿಗೆ ನಾನೇ ಹೂ ಹಾಸಿರುವೆ.
ಕಸಿವಿಸಿಯ ನೂವ ನುಂಗಿ
ತುಸು ಆಸೆಯ ಬತ್ತಳಿಕೆಯ ಹೆಣೆದಿರುವೆ.
ಒಂದಲ್ಲ ಒಂದು ದಿನ ನೀ
ಜೊತೆಯಾಗುತ್ತಿಯಾ ಎಂಬ ಭರವಸೆಯಿಂದ
ನಾನಿನ್ನೂ ಜೀವ ಹಿಡಿದಿರುವೆ.

- vasu

20 Nov 2018, 10:22 pm
Download App from Playstore: