ಮುತ್ತಿನ ಮನೆ

ಮುತ್ತಿನ ಮನೆಯ ಉಪ್ಪರಿಗೆಯ ಮೇಲೆ
ಸಂಜೆ ತೂಗುತ್ತಿತ್ತು ಒಂದು ತೂಗುದೀಪ!!
ಹಿತ್ತಲ ತುಂಬೆಲ್ಲ ಚಿನ್ನದ ಬೆಳಕ ಚೆಲ್ಲಿ
ಸಣ್ಣಗೆ ಉರಿಯುತ್ತತ್ತು ಪುಟ್ಟ ದೀಪ!!

ಮುತ್ತಿನ ಜಗುಲಿಯಲಿ ಸುತ್ತಲು ಜನ ಇದ್ದು
ಕಾಯ ಬೀಸಿ ಆಡುತ್ತಿದ್ದರು ಪಗಡೆಯಾಟ!!
ನಕ್ಕು ನಗುತಿರುವ ಪುಟ್ಟ ಮೊಮ್ಮಕ್ಕಳಿಗೆ
ಅಜ್ಜಿ ಇಡುತಿದ್ದಳು ಕೈ ತುತ್ತಿನ ಊಟ!!

ಮುತ್ತಿನ ಅಂಗಳಕೆ ಚಿತ್ತಾರದ ರಂಗೋಲಿ
ತಿದ್ದಿ ತೀಡಿದ ಬಣ್ಣ ಬಲು ಚೆಂದವಣ್ಣ!!
ಕೈಯ ಬಳೆಗಳ ನಾದ ಹಾಡುತಿರಲು ಹಾಡ
ಕಾಲಗೆಜ್ಜೆಯ ಸದ್ದು ಕುಣಿದಿಹುದು ನೋಡ!!

ಮುತ್ತಿನ ಕಂಬಕ್ಕೆ ಮೆತ್ತಿರುವ ಚಿತ್ತಾರ
ಎತ್ತಿ ಹಿಡಿದಿಹುದು ಬಲು ಎತ್ತರದ ಚಪ್ಪರ!!
ಎತ್ತ ನೂಡಿದರತ್ತ ಸಂತಸದ ಝೆಂಕಾರ
ಹೂವಂತೆ ಹಣ್ಣಂತೆ ಎಲ್ಲೆಲ್ಲೂ ಶೃಂಗಾರ!!

- ಪಿ.ಜಿ.ಜ್ಯೋತಿ

23 Nov 2018, 02:22 pm
Download App from Playstore: