ಚಂಚಲ ಮನಸಿನ ಸಂಚಾರ
ಚಂಚಲ ಮನಸಿನ ಸಂಚಾರ
ಸಾಗದು ಎಂದಿಗೂ ಬಹುದೂರ!!
ಹೆಜ್ಜೆ ಹೆಜ್ಜೆಗೂ ಸಲ್ಲದ ವಿಚಾರ
ಇದುವೇ ಮುತ್ತಿದ ಅಂದಕಾರ!!
ನಿದಿರೆಯಲಿದ್ದರೂ ಕನಸಿನ ಎಚ್ಚರ
ಕೊಂಡೊಯ್ಯುವುದು ಬಹು ದೂರ!!
ಹಗಲಲಿ ಕಲ್ಪನೆ ಕಣ್ಣಿಗೆ ಕಾತುರ
ಮಿಂಚುತಲಿರುವುದೇ ಆಕಾರ!!
ನೆನಪಿನ ಅಂಚಲಿ ಮನಸಿನ ಹತ್ತಿರ
ಸುಳಿದಾಡುವುದೇ ಸಮಾಚಾರ!!
ಚಂಚಲ ಮನಸಿನ ಸಾವಿರ ಪ್ರಶ್ನೆಗೆ
ದೊರಕದೇ ಉಳಿದಿದೆ ಪರಿಹಾರ!!
- ಪಿ.ಜಿ.ಜ್ಯೋತಿ
23 Nov 2018, 05:18 pm
Download App from Playstore: