ಕಣ್ಣೀರ ಕಾಣಿಕೆ

ಹಗಲಿರುಳು ನಿನ್ನ ದಾರಿ
ಕಾಯತಿದ್ದ ನನ್ನ ಕಣ್ಣುಗಳಿಗೆ..‌.

ಪ್ರತಿ ಕ್ಷಣವೂ ನಿನ್ನ ನೋಡ
ಬಯಸುತಿದ್ದ ನನ್ನ ಕಣ್ಣುಗಳಿಗೆ...

ಸುತ್ತ ನಿನ್ನ ಸುಳಿವಿಲ್ಲದಿದ್ದರೂ
ಹುಡುಕುತಿದ್ದ ನನ್ನ ಕಣ್ಣುಗಳಿಗೆ...

ಒಮ್ಮೆ ನಿನ್ನ ಕಂಡೊಡನೆ
ಸಂಭ್ರಮಿಸುತ್ತಿದ್ದ ನನ್ನ ಕಣ್ಣುಗಳಿಗೆ...

ಕೊನೆಯದಾಗಿ ನೀ ಕೊಟ್ಟ ಕಾಣಿಕೆ
ಮರೆಯದಂತ ಈ ಕಣ್ಣೀರ ಕಾಣಿಕೆ...

- ಪಿ.ಜಿ.ಜ್ಯೋತಿ

23 Nov 2018, 05:54 pm
Download App from Playstore: