ಗಾಜಿನ ಪಂಜರ

ಗಾಜಿನ ಪಂಜರದೊಳಿಹುದು
ಈ ನನ್ನ ಬದುಕು!!
ಅಪರೂಪವಾಗಿ ದೊರೆತೆ
ನೀ ಏಕೈಕ ಸಂಗಾತಿ!!

ಅಂದು ಬಂದುಗಳೆಲ್ಲ
ಪಂಜರದ ಹೊರಗೆ!!
ಕೈ ಚಾಚಿದರೂ ಬರರು
ಪಂಜರದ ಒಳಗೆ!!

ನೋಡುತಲೇ ಕಣ್ಣ ಮುಂದೆ
ಹಾದು ಹೋಗುವ ಜನರು!!
ಕರೆದರೂ ಕೇಳದಂತೆ
ಮುಂದೆ ಸಾಗುವರು!!

ನಿನ್ನ ಹೊರತು ಯಾರಿಲ್ಲ
ಓ ನನ್ನ ಸಂಗಾತಿ!!
ನೀ ಕೈ ಬಿಡದೇ ಜೊತೆಗಿರು
ಎನ್ನುವುದೇ ವಿನಂತಿ!!

- ಪಿ.ಜಿ.ಜ್ಯೋತಿ

25 Nov 2018, 04:31 pm
Download App from Playstore: