ಆಸೆಗಳ ಪರ್ವತದ ಮೇಲೆ

ಆಸೆಗಳ ಪರ್ವತದ ಮೇಲೆ
ಕಾಸಗಲ ಬದುಕಿನ ಬುಟ್ಟಿ!!
ನೇಸರನ ಬೆಳಕಿನ ಲೀಲೆ
ಉರುಳುವ ಕಾಲವ ತಟ್ಟಿ!!

ಹಗಲಿರುಳು ಬರೀ ತಿರುಳು
ತನ್ನದೆಂಬ ಕ್ಷಣವು ಇರಲು!!
ಸ್ವಾರ್ಥವದು ಬರೀ ಹುರುಳು
ನಿಸ್ವಾರ್ಥವನ್ನ ಮರೆತಿರಲು!!

ನಿನ್ನ ಜನನವು ನಿನ್ನದಲ್ಲ
ನಿನ್ನ ಮರಣವು ನಿನ್ನದಲ್ಲ!!
ಯಾರೋ ತೆತ್ತು ಹೋದ ಭಿಕ್ಷೆ
ಬದುಕು ನಿನ್ನ ಜೋಳಿಗೆಯಲ್ಲಿ!!

ಎಲ್ಲ ಇದ್ದರೂ ಮೋಹ ನಿನಗೆ
ಇಲ್ಲ ಎನ್ನುವ ಬದುಕೇ ಕೊನೆಗೆ!!
ಸತ್ತ ಮೇಲೂ ಅರಿಯೆ ನೀನು
ಬದುಕಿನಲ್ಲಿ ಪಡೆದಿರುವುದೇನು!!

- ಪಿ.ಜಿ.ಜ್ಯೋತಿ

26 Nov 2018, 02:24 pm
Download App from Playstore: