ನೆನಪುಗಳು
ರಾತ್ರಿ ಮಲಗಿದ ವೇಳೆಯಲ್ಲಿ ನನ್ನಲ್ಲಿನ ನಿನ್ನ ನೆನಪುಗಳು ಎಚ್ಚರಗೊಂಡಂತಿವೆ ಇನಿಯ ಸೋತ ಕಂಗಳ ಮರೆಯಲ್ಲಿ ನಿನ್ನ ನೆನೆಯುತಾ ಪಿಸುಗುಡುತ್ತಿವೆ ನೂರೆಂಟು ಕಥೆಗಳು.
ನಿನ್ನ ಕಣ್ಣರೆಪ್ಪೆ ಅದುರುತಿರುವ ವೇಳೆಯಲ್ಲಿ ಚಳಿಗೂ ಚಳಿಯಾದಿತೇನೋ ಎಂಬಂತೆ ನನ್ನಲ್ಲಿನ ಬಿಸಿಯುಸಿರಾಗಲು ಬಯಸಿ ಹೃದಯದಲ್ಲಿ ಸೇರಿವೆ ನಾ ನೋಡಲಾರದೆ ನಾಚುವ ಆ ಎರಡು ಕಂಗಳು.
ಚಂದ್ರನ ಬಿಲ್ಲಂತೆ ಬಾಗಿದ ನಡು ನಿನ್ನೆಡೆಗೆ ನೋಡಿದಾಗಿ ನನ್ನ ಕಣ್ಣಲ್ಲಿ ನಿಂತ ಶಶಿಯೂ ನೀನಾದೆ, ತನುವು ಬಯಸಿದ ಸ್ಪರ್ಶೆಗೆ ಉಸಿರಿತ್ತ ಒಡೆಯನಾಗಿ ಮನ ಕದ್ದು ನನ್ನವನಾದೆ.
ತಂಗಾಳಿಯಲ್ಲಿ ತೇಲಿ ಬಂದ ಘಮವೊಂದು ಹೇಳಿದಂತಿದೆ, ಮರೆತಂತ ಮಾತುಗಳು ಉಳಿದಿವೆ ತುಟಿಗಳ ನಡುವಲ್ಲಿ ನಿನ್ನ ಕಂಡಾಗ ಹೇಳಿಬಿಡು ಮರೆಯದೆ ಎಂದು.
ಒರೆನೋಟಕೆ ವಯಸ್ಸಾಗುವ ಮುನ್ನ ಕೋಟಿ ಪತ್ರಗಳ ಬರೆಯುವಾಸೆ ಬಂದಂತಿದೆ, ನಿನ್ನ ಕಣ್ಣ ಸಹ್ನೆಗಳ ಮಾತು ಬಳಸಿ ಬಣ್ಣವಿಲ್ಲದ ಶಾಹಿಗೆ ನಿನ್ನ ನಗೆ ತುಂಬಿಸಿ.
ಕಡಲ ತೀರದಿ ನಿನ್ನ ಪಾದ ಚುಂಬಿಸುತ್ತಾ ಸಾಗುವ ಅಲೆಗಳಲ್ಲಿ ನನ್ನ ಹೆಸರು ಬರೆದ ನೀನು ಮರೆತೆ, ಪಾದದಡಿಯಲಿ ನಿನ್ನ ಒರುವ ಮಣ್ಣು ನಾನೆಂದು ಗೆಳೆಯ.
ಅಳಿಸಲಾರೆ ನನ್ನುಸಿರು ಬರೆದಿರುವ ನಿನ್ನೆಸರು ನನ್ನ ಹೃದಯ ಬಡಿತದಲ್ಲಿ ,ನಾನಿರುವರೆಗೂ ನಿನ್ನ ನೆರಳಾಗಿ❤
- ಚುಕ್ಕಿ
27 Nov 2018, 03:35 pm
Download App from Playstore: