ಬಾಳಲ್ಲಿ ನೀ ಬಂದೆ
ಬಾಳಲ್ಲಿ ನೀ ಬಂದೆ
ಓ ನನ್ನಯ ಕಂದ!!
ನೀ ತಂದೆ ಈ ಬಂಧ
ಬಲು ಸಂತೋಷದಿಂದ!!
ಮಡಿಲಲ್ಲಿ ನೀ ಇರಲು
ಏನೋ ಆನಂದ!!
ಕರುಳ ಬಳ್ಳಿಯೇ ಇದು
ಬಿಡಿಸದ ಸಂಬಂಧ!!
ಸಾಟಿ ಇಲ್ಲದ ಹಾಡು
ಸ್ವಾರ್ಥವಿಲ್ಲದ ಗೂಡು!!
ಜೋ ಲಾಲಿ ಜೋಕಾಲಿ
ನಿನಗೇನೇ ಓ ಕಂದ!!
ಈ ಸ್ವರ್ಗ ನಿಸರ್ಗ
ಎಲ್ಲಾನೂ ಭುವಿಯಲ್ಲಿ!!
ನೀ ಆಡಿ ನಗುತಿರಲು
ಬಾಳೆಲ್ಲ ಸಿಹಿ ಕಡಲು!!
ಈ ಪರಿಯ ವಾತ್ಸಲ್ಯ
ನನ್ನೊಳಗೆ ಇದೇ ಮೊದಲು!!
ನಾ ಕೇಳೇ ಉಲ್ಲಸ
ಮೊದಲನೇ ನಿನ್ನ ತೊದಲು!!
ನೀ ಹೆಜ್ಜೆ ಇಟ್ಟಲ್ಲಿ
ಚೆಂದಾದ ರಂಗೋಲಿ!!
ನೀ ತಂದ ಸಂಭ್ರಮಕೆ
ಇರದು ಯಾವ ಬೇಲಿ!!
- ಪಿ.ಜಿ.ಜ್ಯೋತಿ
05 Dec 2018, 11:28 am
Download App from Playstore: