*ಅವಮಾನದ ಸಿಡಿಲು*

ಕಾದ ಹೆಂಚು ಕೆಂಪನೆ ಜಗಮಗಿಸುತ್ತಿತ್ತು
ಅಂತರಂಗದಲಿ ಕೋಲಾಹಲ ಮುಗಿಲು ಮುಟ್ಟಿತ್ತು
ಸಂಭ್ರಮದ ಸಂತೆ ನಗುವನ್ನು ಮರೆತಂತಿತ್ತು
ಮೌನ ಅಸನೀಯವಾಗಿ ರೋಧಿಸುತ್ತಿತ್ತು!

ಏನಾಯಿತು ಯಾಕೆ ಹೀಗಾಯಿತು?
ವದನದಲಿ ಮರೆಯಾಗದ ಪ್ರಶ್ನಾರ್ಥಕ
ಅರ್ಥ ಸಿಗದೆ ಕಲ್ಪನೆಯತ್ತ ಜಾರುವ ಮನ
ಕ್ಷಣಿಕ ಮೌನಕೆ ಸೆರೆಯಾಗುವ ತವಕ!

ಅವಳು, ಅವಳೆಂದರೆ ಅಚ್ಚುಮೆಚ್ಚು ಹೃದಯಕೆ
ಗರಿಗೆದರಿ ಕನಸುಕಟ್ಟಿದ ಆ ಕ್ಷಣಗಳು
ಮೋಸದಳಿಂದವಳು ಮರೆಯಾಗಿ, ಖುಷಿಯ ಮನಸು
ನುಚ್ಚೂನೂರಾಗಿ ನೆಲಸೇರಿದ ಕನಸುಗಳು!

ತಿಳಿಸಿ ಹೇಳಲಿ ಹೇಗೆ ನಾ ನೆರೆದವರ ಮುಂದೆ
ನಿಂತು ತಲೆತಗ್ಗಿಸಲು ತಪ್ಪಿಲ್ಲ ಯಾವುದು ನನ್ನದು
ಮೋಡ ಕರಗಿ ತಿಳಿಯಾದರೂ ನಾಳಿನ ಚಿಂತೆ
ಅವಮಾನ ಸಹಿಸಲು ಅವಳನ್ನೇ ಮರೆಯಬೇಕಂತೆ!!!


ಪ್ರಿಯಾಂಕ ಬಿಜೂರು

- ಪ್ರಿಯಾಂಕ

11 Dec 2018, 12:46 pm
Download App from Playstore: