-ಚುಂಬಕ ನೋಟ-

ಪಂಕಜಾಕ್ಷಿ ಎನ್ನಲೇ,

ಜಲಜಾಕ್ಷಿ, ನಳಿನಾಕ್ಷಿಗಳೆಲ್ಲ

ಒಂದೇ ನಾಮವಲ್ಲವೇ,

ಕಮಲಾಕ್ಷಿಯೇ ಸಾಲದೇ,

ಮೀನಾಕ್ಷಿ ಎನ್ನಲೇ,

ಕಾಮಾಕ್ಷಿ ಎನ್ನಲೇ,

ಶುದ್ಧವಾದ, ಸ್ಪಟಿಕದಂತ

ವಿಮಲಾಕ್ಷಿ ಸಲ್ಲದೇ!!


ಅಕ್ಷಿ ನಿನ್ನದಾದರೂ

ನೋಟ ನನ್ನದಾಗಿದೆ,

ನೂರು ಕಣ್ಣು ನೋಡುತಿರಲು

ದೃಷ್ಟಿ ನಿನ್ನ ಮೇಲಿದೆ,

ಲಜ್ಜೆ ಗೆಟ್ಟ ಪ್ರಾಯವದುವೆ

ಪ್ರೀತಿಯನ್ನು ಬಯಸಿದೆ,

ಸುರತ ನಿರತ ಕಾಮ ಕೇಳಿ

ಬಯಕೆಯಾಗಿ ಮೂಡಿದೆ!!


ಮಾಂತ್ರಿಕತೆ ಕಣ್ಣಲಿದೆ,

ಮಾದಕತೆಯ ನೋಟವಿದೆ,

ಚುಂಬಕತೆಯ ಶಕ್ತಿಯೂ

ನೋಟದಲ್ಲೇ ಅಡಗಿದೆ,

ಮಾಂತ್ರಿಕತೆಯ ಮೆಟ್ಟ ಬಲ್ಲೆ,

ಮಾದಕತೆಯ ಮೀರ ಬಲ್ಲೆ,

ಚುಂಬಕತೆಯ ಪುಳಕದಲ್ಲಿ

ಮಿಳಿತವಾಗುವಾಸೆ ನಲ್ಲೆ!!


-ಡಾ!ಸಿ. ಮುರಳೀಧರ

ಡಿಶಂಬರ, 2018

- ಡಾ!ಸಿ.ಮುರಳೀಧರ

23 Dec 2018, 10:41 pm
Download App from Playstore: