ಪ್ರೇಮ

ಭಾವಾಂತರಂಗದಿ ಅರಳಿ
ಘಮಿಸುತಿದೆ ಪ್ರೇಮ!!
ಇಳಿಜಾರ ಮನಸಿನ ಮೇಲೆ
ಹರಿಯುತಿದೆ ಪ್ರೇಮ!!

ನನ್ನೆದೆಯ ಬಾನಂಗಳದಿ
ಹೊಳೆಯುತಿದೆ ಪ್ರೇಮ!!
ನನ್ನುಸಿರ ಏರಿಳಿತದಲಿ
ಬೆರೆತಂತಿದೆ ಪ್ರೇಮ!!

ಕಲ್ಪನೆಯ ಕಣ್ಣುಗಳಲ್ಲಿ
ಕಂಗೊಳಿಸುತಿದೆ ಪ್ರೇಮ!!
ಕನಸುಗಳ ಸರಮಾಲೆಯನು
ಹೆಣೆಯುತಿದೆ ಪ್ರೇಮ!!

ನಿಶ್ಯಬ್ಧದ ಆಣತಿಯಂತೆ
ನನ್ನ ಸೇರಿದೆ ಪ್ರೇಮ!!
ಮನದೊಳಗಿನ ಮನೆಯಲ್ಲಿ
ಬೇರೂರಿದೆ ಪ್ರೇಮ!!

- ಪಿ.ಜಿ.ಜ್ಯೋತಿ

31 Dec 2018, 03:13 pm
Download App from Playstore: