ನಿನ್ನ ನಸೀಬದಾಗ.!
ನಿನ್ನ ಜೀವನ
ಸುಂದರವಾಗಿರಬೇಕು,
ನಿನ್ನೆಲ್ಲ ಕನಸುಗಳು
ನೆರವೇರಬೇಕು,
ಎಂಬ ನನ್ನಾಸೆ
ಇಂದು ಸುಳ್ಳಾಯಿತಲ್ಲ.!
ವಿಧಿ ನಿನ್ನ ಬಾಳಿನಲ್ಲಿ
ಅದು ಯಾಕೆ ಆಟವಾಡಿತೋ,
ಸದಾ ನಗುತಿರಬೇಕಾದ
ನಿನ್ನ ಮುಖದಲ್ಲಿ,
ಶಾಶ್ವತವಾಗಿ ಕಣ್ಣೀರು
ಹಾಕುವಂತೆ ಮಾಡಿ ಬಿಟ್ಟಿತಲ್ಲ.!
ಜೊತೆಯಾಗಿ ಬಂದ
ನಿನ್ನ ಯಜಮಾನ,
ನಿನ ಬಾಳಿಗೆ ಇಂದು
ಮುಳ್ಳಾಗಿ ನಿಂತು,
ಮೃಗವಾಗಿ ಬೆಳೆದು
ಅವನಿಂದ ದೂರಾಗಬೇಕಾಯಿತಲ್ಲ.!
ನಿನ ಬಾಳಿನ ಬಂಡಿಯನ್ನು
ನೀನೊಬ್ಬಳೇ ದೂಕಬೇಕು
ದೂಕಿ ದಡ ಸೇರಲೇ ಬೇಕು,
ನಿನ್ನ ನಸೀಬದ ಸಾಹೇಬ
ಹೊಟ್ಟೆ ಕಿಚ್ಚು ಪಡುವಂತೆ
ಬದುಕಿ ತೋರಿಸು ನೀ ಜಗಕ್ಕೆಲ್ಲ!
ಇಂತಿ ಸ್ನೇಹ ಸಿಂಚನ...
- vasu
01 Jan 2019, 04:25 pm
Download App from Playstore: