ಇಂದಿನ ಮಕ್ಕಳು

ಮೈದಾನವ ತೊರೆದು
ಮೊಬೈಲನ್ನು ಹಿಡಿದು
ಸವಿಯುತಿಹವು ಬಾಲ್ಯವನಿಂದು

ಹೊತ್ತಿಗೆಯಿಂದ ಹೊರಗೆ
ಕಂಪ್ಯೂಟರಿನ ಒಳಗೆ
ಬೆಳೆಯುತಿಹರು ಮೌಲ್ಯಗಳಿಂದ ಹೊರಗೆ

ಮನೆಯಂಗಳ ತೊರೆದು
ಸಾಗುವರು,ಕನಸುಗಳ ಹೆಣೆದು
ಕಟ್ಟುತ ಗೆಳೆಯರ ಬಳಗವನಿಂದು

ಸಿಹಿ-ಕಹಿಯ ಮಿಶ್ರಣ
ಉನ್ನತಿ -ಅವನತಿಯ ಹೂರಣ
ಸ್ನೇಹಿತರ ಈ ಸಮ್ಮಿಲನ

ಮೋಹದ ಬಲೆಯಲ್ಲಿ
ಪ್ರೇಮದ ಸೆರೆಯಲ್ಲಿ
ಸಾಗುವರು ಅವನತಿಯ ಅಂಚಿನಲ್ಲಿ




ಶಾರದ

- ಶಕುಂತಲಾ

04 Jan 2019, 06:53 am
Download App from Playstore: