ಹೊಸ ಕನಸು
ಕಾರಿರುಳ ಕಾದಂಬರಿಯೊಂದ ಬರಿಯಬೇಕಿದೆ ನಿದ್ದೆ
ಮಂಪರಿನಲ್ಲಿ ನಿನ್ನ ನೆನಪುಗಳ ತಡೆ ತಡೆದು ನಿಲ್ಲಿಸಿ ನವಿರಿನೊಂದಿಗೆ, ಸಹಕರಿಸುವೆಯಾ ಬೆವೆತ ಅಂಗೈಯ
ನೋವ ಆಲಿಸಿ ನಿನ್ನ ಬೆರಳ ಸೇರಿಸಿ.
ನೂರಾರು ವರ್ಷಗಳಿಂದ ಆಡಬೇಕೆನಿಸಿದೆ
ಸಾವಿರಾರು ಮಾತು ತಾರೆಗಳ ತವರಲ್ಲಿ ತಂಪಾಗಿ
ನಿದ್ರಿಸುತ್ತಿವೆ, ನಿನ್ನ ಕಂಡ ಕೂಡಲೇ ಸುಮ್ಮನಾಗಿ
ನೀ ಅರಿಯುವೆ ಎಂದು ನನ್ನ ಮೌನವಾಗಿ.
ನಗುವಿಗೆ ಹೊಸದಾದ ಪರಿಚಯ ಹೃದಯಗಳ ಸಂದೇಶ ವಿನಿಮಯ, ಮಾತಿಲ್ಲ ಕಥೆಯಿಲ್ಲ ಹೇಳುವ ಆತುರವೂ ಇಲ್ಲ ,ಹೇಳದ ಕಾತುರವೂ ಇಲ್ಲ ನಿನ್ನೊಡನೆ ಕಳೆಯದ
ಕ್ಷಣಗಳ ಎಣಿಕೆಯೊಂದು ಬಿಟ್ಟು ಮನಕೆ.
ಒಮ್ಮೊಮ್ಮೆ ಕರಿಯುವಾಸೆ ಮತ್ತೊಮ್ಮೆ ಮರೆಯುವಾಸೆ, ಮಗದೊಮ್ಮೆ ಬೈಯುವಾಸೆ ಇತ್ತೀಚೆಗೆ ಬೈಯಿಸಿಕೊಳ್ಳುವಾಸೆ ಹೊಸದಾಗಿ ಕಿತ್ತಾಡುವಾಸೆ ಹಳೆಯ ಜಗಳ ಮರೆಸುವಾಸೆ ನಿನ್ನೊಡನೆ ಸೇರಿ ಒಲವೇ..
ಬೇಡವೆಂದು ಬಿಡಿಸಿಕೊಳ್ಳುವ ಆಸೆ ಎಲ್ಲಿಯೂ ಬಿಡದಂತೆ ಕಟ್ಟಿ ಹಾಕುವ ಆಸೆ, ಮುದ್ದಾಗಿ ಮುದ್ದಾಡುವ ಆಸೆ ಕಿರು ಕೋಪದಿ ಚಿರಾಡುವಾಸೆ..
ಜೊತೆಗೊಂದಿಷ್ಟು ದೂರ ನಡೆಯುವಾಸೆ ನಡೆ ನಡೆದು ಸುಮ್ಮನೆ ನಿನ್ನ ನೋಡುತ್ತಾ ನಿಲ್ಲುವಾಸೆ, ನೀ ನನ್ನ ಕರೆದ ಕ್ಷಣ ಓಡಿ ಬಂದು ಬಿಗಿದಪ್ಪಿ ಅಳುವ ಆಸೆ ನಿನ್ನ ಕಣ್ಣಲ್ಲಿ ನನ್ನ ನೋಡಿ ನಗುವ ಆಸೆ ಮನವೇ..
ನೆನ್ನೆ ಇರದಂತ ಮೊನ್ನೆ ಇರದಂತ ಹೊಸ ಅನುಭವ,
ಏತಕೋ ಈ ಕ್ಷಣ ಬಚ್ಚಿಟ್ಟ ಆಸೆಗಳು ಅರಳಿದವು ಹೂದೋಟವಾಗಿ.
- ಚುಕ್ಕಿ
04 Jan 2019, 04:01 pm
Download App from Playstore: