ಚುಂಬಿಸೋ ಮುನ್ನ

ಈ ಕೆನ್ನೆ ಚುಂಬಿಸೋ ಮುನ್ನ
ಹೇ ಹೇ ನೀ ಕೇಳಬೇಕು ನನ್ನ
ಮೈಸವರೊ ತಂಗಾಳಿ ನೆಪ ಹೇಳಿ
ನೀನಿಡಬೇಡ ನವಿರೇಳಿಸೊ ಕಚಗುಳಿ

ಅತ್ತ ಇತ್ತ ಸುತ್ತ ಮುತ್ತ
ನೋಡು, ಕೊಡುವ ಮುನ್ನ ಮುತ್ತ
ನಿನ್ನ ನೋಟ ಜಾರಿದರೇ ನನ್ನತ್ತ
ತಿರುಗಿದೆ ಕಂಡವರೆಲ್ಲರ ಚಿತ್ತ ಇತ್ತ

ಏನದು‌ ನಿನ್ನದು ಉನ್ಮತ್ತ ಪ್ರೀತಿ
ನೀನೆದುರಾದರೆ ಏತಕೀ ಫಜೀತಿ
ನೆಪ‌ ತೋರಿ ನೀ ಕಾಡುವ ರೀತಿ
ಏನೊ ಒಂಥರ ಸುಂದರ ಸ್ಮೃತಿ

ನೀನೇಂದರೆ ಕಾರ್ಗತ್ತಲ‌ ಇರುಳು
ಆದರೇಗೆ ಕಂಡವರಾದರು ಮರುಳು
ನಿನ್ನ ಕಂಡರೆ ಬೀಗುತದೆ ಹೆಣ್ಣ ಹೆರಳು
ಅದೇಗೆ ತಿಳಿಸುವೆಯ ನೀ ಮುಂಗುರುಳು

ನಿನ್ನ ಮುದ್ದು ಮಾಡಲೇನು ನಾನು
ತನು ಸೋಕಿ ಮೈಮರೆತರೆ ಜಾನು
ಪ್ರೇಮದಲಿ ಸೆರೆ ನೀ ಎಂದೆಂದೂ
ಕಾಯುವೆನು ಜಾರದಂತೆ ನಾನೆಂದು

- ಶ್ರೀಕಾವ್ಯ

05 Jan 2019, 05:32 pm
Download App from Playstore: