ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ
ನನ್ನ ಮುದ್ದು ಕಂದಮ್ಮಗೆ ಲಾಲಿ!!
ಲಾಲಿ ಲಾಲಿ ಲಾಲಿ
ನನ್ನ ಚಿನ್ನದ ಗೊಂಬೆಗೆ ಲಾಲಿ!!
ಬಾನಿನ ತವರೂರಿಂದ
ಆ ಚಂದಮಾಮನು ಬಂದ!!
ಹುಣ್ಣಿಮೆ ನಗೆಯೊಂದನ್ನು
ನಿನಗಾಗಿಯೇ ತಂದ!!
ಲಾಲಿ ಲಾಲಿ ಲಾಲಿ
ಮುದ್ದು ಅರಗಿಣಿಯೇ ಲಾಲಿ!!
ಲಾಲಿ ಲಾಲಿ ಲಾಲಿ
ಕರುಳ ಬಳ್ಳಿಯೆ ನಿನಗೆ ಲಾಲಿ!!
ತಂಪು ತಂಗಾಳಿಯ
ಬಲು ಇಂಪಾದ ಸಂಗೀತ!!
ಜೋಲಿ ತೂಗುಯ್ಯಾಲೆಯು
ಜೀಗುವುದು ನಿನಗಂತ!!
ಲಾಲಿ ಲಾಲಿ ಲಾಲಿ
ಪುಟ್ಟ ಕೂಸಿಗೆ ತಂದ ಲಾಲಿ!!
ಲಾಲಿ ಲಾಲಿ ಲಾಲಿ
ಕಿರುನಗೆಯ ದೀಪಕ್ಕೆ ಲಾಲಿ!!
- ಪಿ.ಜಿ.ಜ್ಯೋತಿ
06 Jan 2019, 10:19 am
Download App from Playstore: