ಹೊಗಳಿಕೆ-ತೆಗಳಿಕೆ

ನಿನ್ನನರಿಯದವರು
ನಿನ್ನನಿಂದು ಜರಿವರು
ಸಾಧಿಸಿದಾಗ ಸಲಾಮು ಹೊಡೆವರು

ಶ್ರಮಿಕನು ನೀನಾಗು
ಸಾಧನೆಗೆ ಮುಂದಾಗು
ನಿನ್ನವರಿಗೆ ನೀ ಮಾದರಿಯಾಗು

ಜನ್ಮದಾತರ ನಲಿವು ನೀನಾಗು
ಗುರುಗಳ ಹಿರಿಮೆ ನೀನಾಗು
ಕಿರಿಯರ ಪಾಲಿನ ಗುರುನೀನಾಗು

ಅಂದನು ನೀನಾಗಿ
ಮೌಡ್ಯಕೆ ವಶವಾಗಿ
ಮರೆಯಾಗದಿರು ಮೌಲ್ಯಕೆ ಹೊರತಾಗಿ

ವ್ಯರ್ಥ ಪ್ರೀತಿಗೆ ಮರುಳಾಗಿ
ಅವಕಾಶ ವಂಚಿತನಾಗಿ
ಮರುಗದಿರು ಮುಂದೊಮ್ಮೆ ಮೂಕನಾಗಿ

ಪ್ರೀತಿ-ಪ್ರೇಮದ ಸೆಲೆ
ಬಿಡಿಸಲಾಗದ ಜೇಡನ ಬಲೆ
ನಡೆವುದಿಲ್ಲಿ ತಾರುಣ್ಯದ ಕೊಲೆ

ತೆಗಳಿಕೆ ಸಾಧನೆಗೆ ಛಲ
ಹೊಗಳಿಕೆ ಸೋಮಾರಿತನಕ್ಕೆ ಬಲ
ಅರಿತು ಸಾಗಿದರೆ ಉತ್ತಮ ಫಲ



ಶಾರದ

- ಶಕುಂತಲಾ

08 Jan 2019, 02:59 am
Download App from Playstore: