ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ
ಭರತ ಖಂಡದ ವೀರಸಂನ್ಯಾಸಿ ಸ್ವಾಮಿ ವಿವೇಕಾನಂದ
ನಿನಗೆ ನಮಿಸುವೆ ನಾ ಆನಂದದಿಂದ..
ಜಗ ಮೆಚ್ಚಿದ ಮಹಾಜಗದ್ಗುರು ನೀನಯ್ಯ
ವಿಶ್ವವ ಬೆಳಗಿದ ಜ್ಞಾನದ ಜ್ಯೋತಿ ನೀನಯ್ಯ..||ಪ||
ನರೇಂದ್ರನಾಥ ನಿನ್ನ ನಿಜ ಹೆಸರಯ್ಯ
ಭರತಮಾತ ನಿನ್ನ ಜೀವದ ಉಸಿರಯ್ಯ..
ರಾಮಕೃಷ್ಣ ನಿನ್ನ ಗುರುದೇವನಯ್ಯ
ಗುರುವಿನ ಗುರಿ ಮುಟ್ಟಿದ ಆ ಮಹಾದೇವ ನೀನಯ್ಯ..
ರಾಮಕೃಷ್ಣಮಠ ಎಂಬ ಜ್ಞಾನದ ತೇರನು ಏರಿ
ಮೂಢನಂಬಿಕೆಗಳ ವಿರುದ್ಧ ಸಮರ ಸಾರುತ
ಜನಮನದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುತ
ಜನರೇ ದೇವರೆಂದು ಜನಸೇವೆ ಮಾಡುತ
ಮಹಾನ್ ಸಮಾಜ ಸುಧಾರಕ ನೀನಾದೆನಯ್ಯ..
ಯುವಶಕ್ತಿ ಎಂಬ ಪ್ರಗತಿರಥವೇರಿ
ಏಳಿಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ ಎಂದು ಘೋಷಿಸುತ
ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದು ಎಚ್ಚರಿಸುತ
ಯುಗಯುಗದಲೂ ಯುವಜನರ ಸ್ಫೂರ್ತಿಪಥ ನೀನಾದೆನಯ್ಯ..
ವಿಶ್ವಧರ್ಮ ಸಮ್ಮೇಳನ ಎಂಬ ಅಹಂಮನಗಳ ತುಳಿದು
ವೀರಕೇಸರಿಯಂತೆ ಮಾತಿನ ಘರ್ಜನೆ ಮಾಡುತ
ಹಿಂದೂಸಂಸ್ಕೃತಿ ಶ್ರೇಷ್ಠತೆ ಜಗಕೆ ಸಾರುತ
ಸರ್ವಧರ್ಮ ಸಮನ್ವಯ ತತ್ವ ಬಿತ್ತುತ
ಮಹಾನ್ ವಿಶ್ವಮಾನವ ಎಂಬ ಕೀರ್ತೀ ಪಡೆದಿರುವವ ನೀನಯ್ಯ..
- ಸುರೇಶ್ ಟಿ ವಿ
12 Jan 2019, 09:07 am
Download App from Playstore: