ಸಂಕ್ರಾಂತಿ ಹಬ್ಬ
ಹಬ್ಬವೋ ಹಬ್ಬ ಸಂಕ್ರಾಂತಿ ಹಬ್ಬ
ಹರುಷವೋ ಹರುಷ ಊರಿನ ತುಂಬ..
ಸುಗ್ಗಿಯ ಸೊಬಗು ಎಲ್ಲೆಲ್ಲೂ ಅಬ್ಬಬ್ಬಾ
ಹುಗ್ಗಿಯ ಸೊಗಸು ಮನಸಿನ ತುಂಬ..||ಪ||
ಧಾನ್ಯಗಳು ರಾಶಿರಾಶಿ ಜೀವನವು ಖುಷಿಖುಷಿ
ಈ ಭೂತಾಯಿಯ ವರದಿಂದ ಈ ರೈತನ ಬೆವರಿಂದ..
ತೂಗಿದರೆ ಚಿನ್ನದ ತೆನೆಯಿಂದ ಹೊಲ
ಬೆಳಗುವುದು ನಮ್ಮ ಬಾಳು ನೂರುಕಾಲ..
ಕೈಕಟ್ಟಿ ಕುಳಿತರೆ ರೈತ ಯಾರಿಗೂ ಸಿಗದು ಸುಖಶಾಂತಿ
ಕಾಳು ಬೆಳೆದು ಕೊಟ್ಟರೆ ರೈತ ಪ್ರತಿ ಮನೆಮನೆಯಲ್ಲೂ ಸಂಕ್ರಾಂತಿ..
ಹರುಷದಿ ಹಂಚೋಣ ಎಳ್ಳುಬೆಲ್ಲ
ಪ್ರೀತಿ ಸ್ನೇಹದಿ ಬಾಳೋಣ ಬದುಕೆಲ್ಲ..
ಬಿಡಿಸೋಣ ಒಲವಿನ ಬಣ್ಣದ ರಂಗೋಲಿ ಮನೆಅಂಗಳದಲಿ
ಬೆಳಗೋಣ ಸೂರ್ಯನ ಹಾಗೆ ನಾವೆಲ್ಲ ಈ ಜಗದಲಿ..
ಸಡಗರದಿಂದ ಕುಣಿದು ಕುಪ್ಪಳಿಸೋಣ
ಭೂತಾಯಿಯ ಭಕ್ತಿಯಿಂದ ಭಜಿಸೋಣ..
- ಸುರೇಶ್ ಟಿ ವಿ
14 Jan 2019, 05:14 pm
Download App from Playstore: