ಮರೆಯುವ ಹಾಗಿಲ್ಲ

ಮರೆಯುವ ಹಾಗಿಲ್ಲ
ನಿನ್ನನು ಮರೆಯುವ ಹಾಗಿಲ್ಲ!!
ನಿನ್ನೊಡನಾಡಿದ ಬಾಲ್ಯದ ಆ ದಿನ
ಮರೆಯುವ ಹಾಗಿಲ್ಲ!!

ಯರದೂ ಹಂಗಿಲ್ಲ
ಸ್ನೇಹಕೆ ಯಾರದೂ ಹಂಗಿಲ್ಲ!!
ಅಂಕೆ ಶಂಕೆಯೇ ಇಲ್ಲದ ಸ್ನೇಹವ
ಮೀರಿಸುವರು ಯಾರಿಲ್ಲ!!

ಕಳೆದಿಹ ನೆನಪಲ್ಲಿ
ಮಿಂದಿಹ ಖುಷಿ ಇಲ್ಲಿ!!
ಇಂದಿಗೂ ಎಂದಿಗೂ ಚಂದವು
ಆ ದಿನ ಮರೆಯುವ ಹಾಗಿಲ್ಲ!!

ಮೂರಕ್ಕೆ ಇಳಿದಿಲ್ಲ
ಆರಕ್ಕೂ ಏರಿಲ್ಲ!!
ಯಾರದೋ ಬೇಲಿ ಹಾರಿ ಓಡಿದ
ನೆನಪೂ ಮಾಸಿಲ್ಲ!!

ನಾಳೆಯ ಕನಸಿಗೂ ಅಂದು
ಸ್ಥಳವನು ಕೊಟ್ಟಿಲ್ಲ!!
ಬೆಟ್ಟ ಬಯಲು ಊರು ಕೇರಿ
ಸುತ್ತದ ಸ್ಥಳವಿಲ್ಲ!!

- ಪಿ.ಜಿ.ಜ್ಯೋತಿ

18 Jan 2019, 03:59 pm
Download App from Playstore: