ನೆನಪೆಂಬ ಪುಟದಿಂದ ಮರೆಯಲಿ ಹೇಗೆ ನಿನ್ನ

ಮನಸ್ಸಿನ ದೇವತೆ ನೀನು,ನನ್ನೊಂದಿಗೆ ಇನ್ನಿಲ್ಲ
ಈ ಜೀವಕ್ಕೆ ಸಂಗಾತಿ ನೀ ಇನ್ನೂ ನನಗಿಲ್ಲ
ಈ ಹೃದಯಕ್ಕೆ ಒಡತಿಯೂ ನೀನು ಎಂದೂ ನಂಬಿದೆ ನಾನು
ಈ ಜೀವದ ಭಾವನೆಗಳನ್ನು ತಲ್ಲಿಸಿದವಳು ನೀನು
ಒಬ್ಬಂಟಿ ಆಗಿರಬೇಕು ಜೀವಿಸಲು ಕಲಿಯಬೇಕು
ನೀ ನನ್ನ ಮರೆತಿರುವೆ ಅದನ್ನು ನೆನೆಸಿ ಕೊರಗಬೇಕು
ನೆನಪಿಸೋ ಮಾತೇ
ಇನ್ನಿಲ್ಲ ನಿನ್ನ ನೆನಪಲ್ಲಿ ಕೊರಗುವುದಿಲ್ಲ
ಪ್ರೀತಿ ಮಾಡಿದ ದಿನವ ಯೋಚಿಸಿ ನೀನು ಎಂದೂ ಅಳಬೇಕು
ನಾನು ನೀಡಿದ ಪ್ರೇಮಕ್ಕೆ ಬದಲು ನೋವೇ ನನಗಿನ್ನು ಸಾಕು
ದ್ವೇಷ ನನಗೆ ಇಲ್ಲ ನಿನ್ನಲ್ಲಿ ಕರುಣೆ ಅನ್ನೋದೆ ಇಲ್ಲ
ನಿನ್ನ ಮೋಸಕ್ಕೆ ಬಲಿಯಾದ ಪಾಪಿ ನಾನು ಇನ್ನೊಂದು ನಿನ್ನ ಮುಂದೆಯೇ ಸಾಧಿಸಿ ಬಾಳುವ ಆಸೆ ಇದೆ ಒಂದೂ
ಮರೆಯಬೇಕು ನಿನ್ನ ನಾನು ಮರೆತು ಜೀವನ ಕಳೆಯಬೇಕು ಇನ್ನೂ
ನಿನ್ನ ಕೈ ಹಿಡಿದು ನಡೆಸುವವನು ಭಾಗ್ಯವಂತನಿರಬೇಕು ಜೀವಿಸುವ ಕಾಲ ನೀನಿನ್ನು ಸುಖವಾಗಿ ಇದ್ದರೆ ಸಾಕು ನೋವು ನನಗಿರಲಿ ಖುಷಿಯು ನಿನ್ನ ಜೊತೆಗಿನ್ನು ಬರಲಿ
ನನ್ನೊಂದಿಗೆ ಕಳೆದ ದಿನವನ್ನು ಕನಸು ಎಂದು ನೆನೆಸು ವಿಧಿಯಾಟದಲ್ಲಿ ಬಲಿಯಾದನೆಂಬ ನೋಡಿ ಬದುಕಲೇ ಇನ್ನೂ

- ಎಸ್.ಬಿ

18 Jan 2019, 08:24 pm
Download App from Playstore: