ಗೆಳತಿ
ಸ್ವಲ್ಪ ಕೋಪ, ಜಾಸ್ತಿ ತರಲೆ,
ಮುದ್ದು ಮನಸಿನ ಮುಗ್ದ ಹುಡುಗಿ
ಇವಳ ಕಂಡರೆ ಯಾರಿಗಿಲ್ಲ ಮನಸ್ತಾಪ
ನಗುಮನಸಿನ ಸುಂದರ ಈ ಪುಡುಗಿ
ಮನಸು ಮಗುತರ, ನಿರ್ಮಲ ಹೃದಯ ,
ಯಾರಿಗೂ ನೋಯಿಸಿಲ್ಲ ಹಿಂದೆಂದೂ
ಎಂದೂ ಮರೆಯೋದಿಲ್ಲ ಒಂದು ವಿಷಯ
ಕುಟುಂಬವನ್ನು ಬಿಟ್ಟುಕೊಡಲ್ಲ ಮುಂದೆಂದೂ!
ಸ್ನೇಹಕ್ಕೆ ಬೆಲೆಕೊಡುವಳು,ಪ್ರೀತಿಗೆ ತಲೆಬಾಗುವಳು
ಮಗುವಿನ ಜೊತೆ ಮಗುವಂತೆ ಆಡಬಲ್ಲಳು
ನಗುಮೊಗದಿ ಎಲ್ಲರೊಂದಿಗೆ ಒಂದಾಗುವಳು
ಸುಖ ದುಃಖದಲ್ಲಿ ಸಮಾನ ಭಾಗಿಯಾಗುವಳು!
ನೇರನುಡಿಯಿಂದ ಮನಸ್ಸು ಗೆದ್ದವಳು ನೀನು
ಸತ್ಯದ ಮಾರ್ಗದಲಿ ಗೆಲುವು ಎಂದೂ ನಿನ್ನದಿರಲಿ
ಕನಸುಗಳು ನನಸಾಗಲೆಂದು ಹಾರೈಸುವೆ ನಾನು
ನಮ್ಮಿಬ್ಬರ ಸ್ನೇಹದ ಹೂವು ಎಂದೂ ಬಾಡದಿರಲಿ!
- ಪ್ರಿಯಾಂಕ
20 Jan 2019, 12:59 pm
Download App from Playstore: