ನೀರಂತೆ ನೀನಾಗು
ನೀರಂತೆ ನೀನಾಗು ಎಗ್ಗು ತಗ್ಗುಗಳಲ್ಲಿ ಹಸನಾಗಿ ಬೆರೆತೊಗು, ಯಾರೂ ನಿನ್ನವರಿಲ್ಲದಿದ್ದರೆ ಎಲ್ಲರೂ ನಿನ್ನವರೆಂದು ತಿಳಿದು ನೀ ಸಾಗು.
ಎಲ್ಲರೂ ನಿಂತ ಸಾಲೆಂದು ದೂರ ನಿಂತರೆ ನೀನು, ದೂರವೇ ನಿಲ್ಲುವೆ ಸಾಲು ಬರಿದಾದರೂನು.
ಬಿಸಿಲಲ್ಲಿ ಬೇಗೆ ಆಗು ಕಡಲು ತನ್ನಲ್ಲಿರಿಸದಿದ್ದಲ್ಲಿ ಮೊಡಕೆ ವಲಸೆ ಹೋಗು, ಮತ್ತೆ ಮಳೆಯಾಗಿ ಭುವಿಯ ಮಡಿಲ ಕೂಸಾಗು.
ಚಳಿಯಲ್ಲಿ ಶೀತವಾಗು ಕರಗದಷ್ಟು ಗಟ್ಟಿಯಾಗು, ಉಸಿರ ಬಿಸಿಗೆ ಕರಗಿಹೋಗು ನಿನ್ನಂತೆ ನೀನಾಗು ನೀರಂತೆ ನೀ ಸಾಗು.
- ಚುಕ್ಕಿ
20 Jan 2019, 04:22 pm
Download App from Playstore: