ಮುಸುಕಿದ ಮಂಜು

ಸುಡುವ ಸೂರ್ಯನು
ಚಂದ್ರನಂತಾದ
ಮುಸುಕಿದ ಮಂಜನು
ಹೊಡೆದೋಡಿಸದಾದ

ಹಿಮದ ರಾಶಿಯಲ್ಲಿ
ರವಿಯ ರಶ್ಮಿಯೆಲ್ಲಿ
ಹರಸುತಿವೆ ನನ್ನೀ ನಯನಗಳು
ಹಿಮಾವೃತವಾಯಿತೆ ಈ ಹಗಲು

ಗ್ರಹಗಳಲ್ಲೆ ಅಗ್ರಗಣ್ಯನು
ಜಗ ಬೆಳಗೋ ಸೂರ್ಯನು
ಬೇದಿಸಲಾರದೆ ನಿಂತನು
ಅರೆಗಳಿಗೆ ಮಂಜೆಂಬ ಶತೃವನು

ಕಷ್ಟ- ನಷ್ಟ ಗಳು ಅಶಾಶ್ವತ
ಸಾಧನೆಯ ಪ್ರಭೆಯೆ ಶಾಶ್ವತ
ಸುಖದ ಸುಪ್ಪತ್ತಿಗೆ ಬರೀ ಕಾಲ್ಪನಿಕ
ಶ್ರದ್ದೆ-ನಿಷ್ಟೆಯಿಂದಿರಬೇಕು ನಮ್ಮೆಲ್ಲರ ಕಾಯಕ




ಶಾರದ

- ಶಕುಂತಲಾ

21 Jan 2019, 04:34 pm
Download App from Playstore: