ಸ್ವಾರ್ಥಿಗಳು

ಸ್ವಾರ್ಥಿಗಳು ಇವರು ಸ್ವಾರ್ಥಿಗಳು
ಹುಡುಗ ಹುಡುಗಿಯರಿವರು ಸ್ವಾರ್ಥಿಗಳು

ಹದಿಹರೆಯದ ವಯಸ್ಸಿನವರು
ಪ್ರೀತಿ ಪ್ರೇಮದಲಿ ಬಿದ್ದವರು
ಕುರುಡು ಪ್ರೀತಿಯಲಿ ತಿರುಗುವರು
ಜಗವ ಮರತೆ ನಿಂತವರೊ ಇವರು
ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು

ಹುಚ್ಚು ಪ್ರೀತಿಯ ನಂಬಿದರು
ಅಪ್ಪ ಅಮ್ಮನ ಪ್ರೀತಿ ಮರೆತರು
ನೆನ್ನೆ ಮೊನ್ನೆ ಬಂದವರ ಕೈ ಹಿಡಿದರು
ಅವರ ಗುಂಗಲಿ ಇವರನ್ನು ಬಿಟ್ಟರು
ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು

ಪ್ರೀತಿ ಕೈಕೊಟ್ಟಾಗ ಸ್ನೇಹಿತರು ನೆನಪಾದರು
ಅಪ್ಪ ಅಮ್ಮನೇ ಅವರಿಗೆ ದೇವರಾದರು
ಅದೆ ಪ್ರೀತಿ ಮತ್ತೆ ಸಿಕ್ಕಾಗ ಸ್ನೇಹಿತರನು ಮರೆತರು,
ಪ್ರೀತಿ ಒಪ್ಪದಿದ್ದಾಗ ಅಪ್ಪ ಅಮ್ಮನೇ ಶತ್ರುಗಳಾದರು
ಇಂತಹ ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು
##ರಜನೀಶ##

- RajaneeshNandikolmath

24 Jan 2019, 01:51 am
Download App from Playstore: