ಭಾರತದ ಸಂವಿಧಾನ
ಜಾರಿಗೆ ಬಂದಿತು ಭಾರತ ದೇಶದ ಸಂವಿಧಾನ
ಅಂದೇ ಕೊಟ್ಟಿತು ಪ್ರಜೆಗೆ ಪ್ರಭುವಿನ ಸ್ಥಾನಮಾನ..
ಜಾರಿಗೆ ಬಂದಿತು ಭಾರತ ದೇಶದ ಸಂವಿಧಾನ
ಪ್ರಜೆಗೆ ನೀಡಿತು ದೇಶದ ಆಡಳಿತ ನಡೆಸುವ ಮಾರ್ಗದರ್ಶನ..
ನನಸಾಯಿತು ಸ್ವಾತಂತ್ರ್ಯ ಹೋರಾಟಗಾರರ ತತ್ವಚಿಂತನ
ಅದಕೆ ಸಲ್ಲಿಸು ನೀನು ಸಂವಿಧಾನಕೆ ನಿತ್ಯನಮನ..||ಪ||
ರಾಜೇಂದ್ರ ಅಂಬೇಡ್ಕರ ಗಣ್ಯರ ಅವಿರತ ಪ್ರಯತ್ನ
ನಮ್ಮ ಸಂವಿಧಾನ ರಚನೆಗೆ ಪ್ರಮುಖ ಕಾರಣ..
ಓದಿದರು ನೂರಾರು ದೇಶಗಳ ಸಂವಿಧಾನ
ದೇಶಕೆ ಅನುಕೂಲವಾಗುವ ಸಂವಿಧಾನ ರಚಿಸುವ ಕಾರಣ..
ನಮ್ಮದು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದ ಸಂವಿಧಾನ
ಇಲ್ಲಿ ಹಿಂದೂ ಮುಸ್ಲಿಂ ಎಲ್ಲರು ಸಮಾನ..
ಸಂಸದೀಯ ಸರ್ಕಾರ ಸಂವಿಧಾನದ ಪ್ರಮುಖ ಲಕ್ಷಣ
ಇಲ್ಲಿ ದೇಶದ ಮುಖ್ಯಸ್ಥನು ಆಯ್ಕೆಯಾಗಬೇಕು ಚುನಾವಣಾ ಮುಖೇನ..
ಕೇಂದ್ರ ರಾಜ್ಯಗಳಲಿ ಅಧಿಕಾರ ಹಂಚಿದ ನಮ್ಮ ಸಂವಿಧಾನ
ಇಲ್ಲಿ ನಡೆಯುವುದು ಬಹುಪಕ್ಷಗಳ ರಾಜಕಾರಣ..
ಮೂಲಭೂತ ಹಕ್ಕುಗಳ ನೀಡಿದ ನಮ್ಮ ಸಂವಿಧಾನ
ಇಲ್ಲಿ ದೇಶಕ್ಕಾಗಿ ದುಡಿವ ಕರ್ತವ್ಯ ಮಾಡು ಪ್ರತಿದಿನ..
- ಸುರೇಶ್ ಟಿ ವಿ
25 Jan 2019, 08:40 pm
Download App from Playstore: