ಭಾಷೆಯ ಬಂಧನದಲಿ ಪ್ರತಿಭೆ
ಬೆಳಗಲಿಳೆಯಲಿ
ಮನವ ತಣಿಸಲಿ
ಬಂದಿಸದಿರಿ ಅದನು
ಭಾಷೆಯ ಸಂಕೋಲೆಯಲಿ
ವಿಜ್ಞಾನಿಯಾಗಿ ವಿಹರಿಸಬಲ್ಲ
ಕವಿಯಾಗಿ ಕರಗಬಲ್ಲ
ಜಾತಿ-ಮತ ಧರ್ಮ ದ
ಎಲ್ಲೆ ಮೀರಿ ತಾ ತೇಲಬಲ್ಲ
ಭಾಷೆಯ ಬಂಧನ ಅವನಿಗೆ ಸಲ್ಲದಲ್ಲ
ಮುಗ್ದ ಮಗುವಿನ ಮನದಲ್ಲಿ
ಆಂಗ್ಲದ ಬೀಜ ಚೆಲ್ಲಿ
ನಿಯಮಗಳ ಬಂಧನದಲಿ
ಬೆಳೆಸದಿರಿ ಪ್ರತೀಷ್ಠೆಯ ಕಣದಲ್ಲಿ
ಮುಗ್ದತೆಯ ಕೊಂದು
ಕೃತಕತೆಯಲಿ ಸಾಗುತಿಹೆವಿಂದು
ಆಂಗ್ಲವೆ ಸರ್ವಸ್ವವೆಂದು
ಮಾತೃಭಾಷೆಯ ಜರಿದು
ಜಗದ ಮೂಲಗಳ
ಮೆಲ್ಲುತ ,ಅನುಭವಗಳ
ಸವಿಯ ಉಣಿಸುತ್ತ
ಮರೆಯಲಾಗದ ಕಗ್ಗವನಿತ್ತ
ಡಿವಿಜಿ ಕನ್ನಡಿಗರಲ್ಲವೆ
ಆಂಗ್ಲವ ಕಲಿತರು
ಕನ್ನಡದಲ್ಲೆ ಉಳಿದರು
ಜ್ಞಾನಪೀಠವ ಅಲಂಕರಿಸಿದ
ಕುವೆಂಪುರವರು ಕನ್ನಡಿಗರಲ್ಲವೆ
ಮಾಂಸದ ಮುದ್ದೆ ಮಗುವಾಗಲು
ಮಾತೆಯೆ ಮೂಲ
ವಿದ್ಯೆ ಮನನವಾಗಲು
ಮತೃಭಾಷೆಯೆ ಮೂಲ
ಬಲ್ಲವರು ನಾವೆಂಬ
ಭಾವನೆಯ ತೊರೆಯಿರಿ
ಅರಿಯುವುದು ಇದೆಯೆಂಬ
ನಿಜವ ತಿಳಿಯಿರಿ
ಅನ್ಯರ ಜರಿಯುವುದ ಬಿಟ್ಟು
ಬಾಳೋಣ ಮನದ ಕದವ ತೆರೆದಿಟ್ಟು
- seenu
27 Jan 2019, 11:01 pm
Download App from Playstore: