ಕೆಸರಾದ ಕೆರೆಯಲ್ಲಿ

ಕೆಸರಾದ ಕೆರೆಯಲ್ಲಿ
ತಾವರೆಯು ಹಸನಾಯ್ತು!!
ಬರಡಾದ ಮರಕೀಗ
ಹೊಸ ಚಿಗುರು ಬಂದಾಯ್ತು!!

ಮೋಡ ಕರಗಿ ಮಳೆ ಸುರಿದು
ಭೂಮಿಯೆಲ್ಲ ತಂಪಾಯ್ತು!!
ಪ್ರಕೃತಿಗೆ ವಸಂತವು
ಎಲ್ಲವೂ ಶುಭವಾಯ್ತು!!

ನಿನ್ನೆ ಕಂಡ ಕನಸುಗಳು
ಇಂದು ತಾನೇ ನಿಜವಾಯ್ತು!!
ಕಹಿಯಾದ ನೆನಪುಗಳು
ಜೇನಿನಂತೆ ಸಿಹಿಯಾಯ್ತು!!

ನನ್ನೆದೆಯ ಚಿಪ್ಪಿನಲಿ
ನಿನ್ನ ನುಡಿ ಮುತ್ತಾಯ್ತು!!
ಮಿಡಿ ಮಿಡಿವ ಹೃದಯಕಿದೋ
ನೀ ದೊರೆತ ವರವಾಯ್ತು!!

ಆನಂದ ಸಂಭ್ರಮಕೆ
ನನ್ನ ಉಸಿರು ಸಾಕ್ಷಿಯಾಯ್ತು!!
ನೀ ಸನಿಹ ಬಂದ ಮೇಲೇ
ಬದುಕಿದು ಸುಂದರವಾಯ್ತು!!

- ಪಿ.ಜಿ.ಜ್ಯೋತಿ

28 Jan 2019, 09:23 am
Download App from Playstore: