ಸ್ವಚ್ಛತೆಯೇ ಆರೋಗ್ಯ
ಮನೆಯ ಕಸವನು ಎಲ್ಲೆಂದರಲ್ಲಿ ಎಸೆಯವ್ನೆ ಗಮಾರ
ಗಲೀಜು ಆಗಿರುವ ಪರಿಸರವನ್ನು ಸ್ವಚ್ಛ ಮಾಡವ್ನೆ ಪೌರ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..||ಪ||
ಸುತ್ತಮುತ್ತಲಿನ ಕಸವನ್ನೆಲ್ಲ ಗುಡಿಸಬೇಕಣ್ಣ
ಬೀದಿಗೆ ಬರುವ ಕಸದಗಾಡಿಗೆ ಕಸವ ಹಾಕಣ್ಣ..
ಕಸ ಅನ್ನೋದು ನಮ್ಮಗಳಿಗೇನೆ ಹಾನಿ ನೋಡಣ್ಣ
ಗಾಂಧಿ ಕನಸು ನನಸು ಮಾಡೋದು ನೀನೆಕಣಣ್ಣ..
ನೀನಿದ್ದ ನಾಡಿಗೆ ಒಳ್ಳೇದು ಮಾಡಣ್ಣ
ಭೂತಾಯಿ ಒಡಲಿಗೆ ಕಸ ಎಂಬ ವಿಷ ಸುರಿಯಬೇಡಣ್ಣ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..
ಪ್ಲಾಸ್ಟಿಕ್ ಚೀಲ ಬಳಸೋದಿಲ್ಲ ಎಂದು ಹೇಳಣ್ಣ
ಪರಿಸರವನ್ನು ರಕ್ಷಿಸೋನು ದೇಶಕೆ ಬೇಕಣ್ಣ..
ಕ್ರಿಮಿಕೀಟ ಹರಡೋದಿಲ್ಲ ಸ್ವಚ್ಛತೆ ಮಾಡಣ್ಣ
ಹಣವೇ ಬಾಳಿಗೆ ಮುಖ್ಯವಲ್ಲ ಆರೋಗ್ಯ ಮೇಲಣ್ಣ..
ಮಾಲಿನ್ಯ ತಡೆಯೋಕೆ ಮುನ್ನುಗ್ಗಿ ಬಾರಣ್ಣ
ನಿನ್ನ ದೇಹ ಮಣ್ಣಾದ್ರೂ ನಿನ್ನ ಹೆಸರು ಮರೆಯೋಲ್ಲ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..
- ಸುರೇಶ್ ಟಿ ವಿ
28 Jan 2019, 12:54 pm
Download App from Playstore: