ಅಧೀನಳಾದೆ ನಾನು
ಆಯತಪ್ಪಿದ ಕನಸುಗಳೆಲ್ಲವು ನಿನ್ನ ಕಣ್ಸನ್ನೆಯ ಅಧೀನದಲ್ಲಿ ಮಾತಿಲ್ಲದೆ ಮೌನವಾಗಿ ಉಳಿದಿವೆ, ನಿನ್ನ ನೋಡುತ್ತಾ ಆ ನೋಟಕೆ ಶರಣಾಗಿ.
ನಿನ್ನ ನೆನಪಲಿ ನಿತ್ಯ
ಉರುಳುವ ಇರುಳ ಸನಿಹ ಬಯಸಿ,ಓಡುತ್ತಿದೆ ಹಗಲೊಂದು ಸಂಜೆಯೆಡೆಗೆ, ಸಾವಿರಾರು ಮಾತು ಉಳಿಸಿ ನಿನ್ನ ಬಳಿ ಹೇಳಲಿಚ್ಛಿಸಿ,
ಮತ್ತೆ ಸೂರ್ಯ ಬರುವ ಮುನ್ನ ಭುವಿಯ ಕಡೆಗೆ.
ಸ್ವಾಧೀನ ನಿನ್ನ ಉಸಿರು ನನ್ನ ಹೆಸರಿಗೆ, ಒಡೆದ ರಾತ್ರಿಯ ಚೂರುಗಳು ಮುಂಜಾವಿನಲಿ ಮುಸುಕಿ ಮಲಗಿದ ಇಬ್ಬನಿಯ ಒಡಲಿಗೆ.
ತನುವ ಮರೆಸುವ ನಿನ್ನ ನಗೆಯ ಸದ್ದು ಮಡಿದ ಕಣ್ಣ ಹನಿಗಳಿಗೂ ಮುದ್ದು, ಕಳೆದ ದಿನಗಳ ನೆನಪಿಗೆ ಮುಂಬರುವ ದಿನಗಳ ಆಸೆಗೆ ನವವಸಂತ ನೀನು.
ಮಗುವ ಮನಸವನ ತುಂಟ ಒಲವಿಗೆ ಅಧೀನಳಾದೆ ನಾನು.
- ಚುಕ್ಕಿ
29 Jan 2019, 04:49 pm
Download App from Playstore: