ಕಡಲಿನಾಳದ ಮುತ್ತು

ಕಡಲಿನಾಳದ ಮುತ್ತು
ಕೊರಳ ಸೇರುವ ಹಾಗೆ
ಮನಸಿನಾಳದ ಪ್ರೀತಿ
ನಿನ್ನ ಸೇರಲಿ ಬೇಗ!!

ತಾನೇ ತನ್ನನು ಮರೆತು
ಕೋಗಿಲೆಯು ಹಾಡುವಂತೆ
ನಾನು ನನ್ನನೇ ಮರೆತು
ನಿನ್ನ ಕಾಯುತ ನಿಂತೆ!!

ಹೂವು ಗಂಧವ ಬೀರಿ
ದುಂಬಿಯನು ಕರೆವಂತೆ
ಕರೆಯಲಾರೆಯಾ ನೀನು
ನನ್ನನು ಬಳಿ ಬರುವಂತೆ!!

ಇರುಳ ಆ ಬಾನಿನಲಿ
ಹೊಳೆವ ಚಂದ್ರನ ಕಾಂತಿ
ಇಳೆಯಲ್ಲಿ ನಾ‌ ಕಂಡ
ಬೆಳದಿಂಗಳೇ ನೀನಂತೆ!!

- ಪಿ.ಜಿ.ಜ್ಯೋತಿ

31 Jan 2019, 03:11 pm
Download App from Playstore: