ಕಣ್ಣಳತೆಯ ದೂರದಲ್ಲಿ

ಕಣ್ಣಳತೆಯ ದೂರದಲ್ಲಿ
ನಾ ಬಂದು ನಿಂತರೂನೂ
ನೋಡಲಾರದೇ ನನ್ನ ನೀನು
ಮರೆಮಾಚುವುದು ಏನನು!!

ಮಾಯದ ಪರದೆಯೊಂದು
ಮುಸುಕಿರಲು ನಿನ್ನನು
ಕಂಡರೂ ಕಾಣದಂತೆ ಇರುವ
ನಟನೆಯೂ ನಿನ್ನದೇ!!

ಪ್ರೀತಿಯ ಆಳಕೆ ಇಳಿದು
ಸಂಭ್ರಮಿಸುತಿರಲು ನಾನು
ನೆನಪು ಅಳಿಸಿದಂತೆ ನಟಿಸಿ
ತೊರೆದೆಯಾ ನನ್ನನು ನೀನು!!

ಯಾವ ತಪ್ಪಿಗಾಗಿ ಈ ಶಿಕ್ಷೆ
ಮರಳಿ ನೀಡು ಪ್ರೀತಿಯ ಭಿಕ್ಷೆ
ಪರದೆ ಸರಿಸಿ ಒಮ್ಮೆ ನೋಡು
ಕಾದಿರುವೆ ನಿನಗಾಗಿ ನಾನು!!

- ಪಿ.ಜಿ.ಜ್ಯೋತಿ

31 Jan 2019, 07:04 pm
Download App from Playstore: