ಮತ್ತೆ ಹುಟ್ಟಿ ಬನ್ನಿ ಓ ನನ್ನ ವೀರ ಯೋಧರೇ

ಮತ್ತೆ ಹುಟ್ಟಿ ಬನ್ನಿ ಓ ನನ್ನ ವೀರ ಯೋಧರೇ
ನಿಮ್ಮ ತ್ಯಾಗ ಬಲಿದಾನಕೆ ಕೋಟಿ ವಂದನೆ..
ಭರತಮಾತೆಯ ರಕ್ಷಣೆಗೆ ನೀವು ಇದ್ದರೆ
ಮಾತೆಯ ಮಕ್ಕಳಿಗೆ ಆಗ ನೆಮ್ಮದಿಯ ನಿದಿರೆ.|ಪ|

ನಾನು ನನ್ನದು ಎಂಬ ಆಸೆ ಸುಟ್ಟು ಹಾಕಿದೆ
ನನ್ನ ದೇಶ ನನ್ನ ಜನ ಎಂದು ಇಷ್ಟಪಟ್ಟು ಹೋರಾಡಿದೆ..
ದೇಶದ್ರೋಹಿಗಳ ಹುಟ್ಟಡಗಿಸಲು ದೇಹ ಚೂರಾದರೂ ಮುನ್ನುಗ್ಗಿದೆ
ರಾಷ್ಟ್ರಧ್ವಜವ ನೆಟ್ಟು ಜೈಹಿಂದ್ ಎನ್ನುತ ಮೆರೆದಾಡಿದೆ..

ಅನುಕ್ಷಣ ಹರುಷದಿಂದ ದೇಶ ಕಾಯುವೆ
ನರನಾಡಿಯಲ್ಲಿ ದೇಶಪ್ರೇಮ ಉಕ್ಕಿ ಹರಿಸುವೆ..
ಉಗ್ರಗಾಮಿ ಗಡಿ ದಾಟಿದರೆ ಸಮರ ಸಾರುವೆ..
ಮಾತೃಭೂಮಿಗಾಗಿ ಹೋರಾಡಿ ವೀರ ಮರಣ ಹೊಂದುವೆ..
ಭಾರತೀಯರ ಎದೆಯಲ್ಲಿ ಎಂದೆಂದು ಅಮರನಾಗುವೆ ಅಮರನಾಗುವೆ...

- ಸುರೇಶ್ ಟಿ ವಿ

15 Feb 2019, 05:38 pm
Download App from Playstore: