ಓ ವೀರ ಯೋಧನೇ ಓ ಶೂರ ಯೋಧನೇ

ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ನಿನ್ನ ತ್ಯಾಗ ಬಲಿದಾನ
ಮರೆಯದು ಎಂದು ಹಿಂದೂಸ್ಥಾನ..
ನಿನ್ನ ಕೆಚ್ಚೆದೆಯ ದೇಶಾಭಿಮಾನ
ಭಾರತೀಯರಿಗೆ ಎಂದೆಂದು ಸುಖಜೀವನ..||ಪ||

ನಿನ್ನವರನ್ನು ಬಿಟ್ಟು ಹೊರಟೆ ಗಡಿಯತ್ತ
ಜೈಹಿಂದ್ ಎಂಬುದೊಂದೇ ನಿನ್ನ ಎದೆಬಡಿತ..
ಕಟ್ಟಿ ಎಸೆದೆ ನಿನ್ನ ಭವ್ಯ ಭವಿಷ್ಯವನ್ನಾ
ಮೇರಾ ಭಾರತ್ ಮಹಾನ್ ಅಂದೆ ಕ್ಷಣ ಕ್ಷಣ..
ಘೋರ ಕದನಕೆ ನೀನು ಸದಾ ಸನ್ನದ್ಧ
ಹೆಮ್ಮೆಯಿಂದ ಬೀಗುವೆ ವೀರಮರಣದಿಂದ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ..


ದ್ರೋಹಿಗಳ ದಂಡು ಧ್ವಂಸ ಮಾಡುವ ಗಂಡು..
ಬಾಂಬ್ ಸಿಡಿಯಲಿ ಗುಂಡಿಗೆ ಹಾರಲಿ
ರಣರಂಗದಲಿ ನೀನು ಉಕ್ಕಿನ ಮನುಷ..
ನೆತ್ತರು ಸುರಿಯಲಿ ಉಸಿರು ಹೋಗಲಿ
ಮಾಡೆ ತೀರುವೆ ಉಗ್ರರನ್ನು ಸರ್ವನಾಶ..
ತ್ರಿವರ್ಣಧ್ವಜ ಹಾರಿದಾಗಲೇ ನಿನಗೆ ಹರುಷ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ...

- ಸುರೇಶ್ ಟಿ ವಿ

17 Feb 2019, 10:30 pm
Download App from Playstore: