ಸೈನಿಕ
ಭರತಖಂಡದ ಶಿಖರ
ನಮ್ಮೀ ಕಾಶ್ಮೀರ
ಒಡಹುಟ್ಟಿದವರ ಈ ಕದನ
ನಮ್ಮೀ ಸೈನಿಕರ ದಹನ
ಎಲ್ಲೋ ಹುಟ್ಟಿವ ಯುವಕ
ಎಲ್ಲೆ ಸೇರಿ ಆಗುವ ಸೈನಿಕ
ಮಾತೆಯ ಕಾಯುವುದೇ ಕಾಯಕ
ಇವನೇ ನಮ್ಮೆಲ್ಲರ ರಕ್ಷಕ
ಹಡೆದವರಿಗೆ ದೂರವಾಗಿ
ಮಡದಿ- ಮಕ್ಕಳಿಗೆ ಮರೆಯಾಗಿ
ಭಾರತಾಂಬೆಯ ಚಿರ ಶಾಂತಿಗಾಗಿ
ಸ್ಥಿರ ನಿದ್ರೆಗೆ ಜಾರಿದ ತ್ಯಾಗಿ
ತನ್ನ ನೆತ್ತರದಿ ಭಾರತಾಂಬೆಗೆ
ತಿಲಕವನಿಟ್ಟು
ತನ್ನವಳ ಹಣೆಯ ಬರಡಾಗಿಸಿದ
ತನ್ನ ಪ್ರಾಣವ ಕೊಟ್ಟು
ದೇಶ ಲೂಟಿ ಮಾಡುವವರ ಪರ
ಸದಾ ನಮ್ಮನ್ನಾಳುವವರ ನಿಲುವು
ದೇಶ ಕಾಯುವ ಯೋಧರ ಪರ-
ಯೋಜನೆಗಳಿಗಿಲ್ಲ ಇವರ ಒಲವು
ವೈಜ್ಞಾನಿಕ ಸಾಧನೆಲಿ
ಜಗ ಮುಟ್ಟಿದೆ ಮಂಗಳ ಲೋಕ
ಸಂಶೋಧಕರ ಗಮನದಲ್ಲಿರಲಿ
ಎಲ್ಲೆ ಕಾಯುವ ನಮ್ಮೀ ಸೈನಿಕ
ಶಾರದ
- ಶಕುಂತಲಾ
18 Feb 2019, 09:42 am
Download App from Playstore: