ಶ್ರಾವಣ ಶ್ರಂಗಾರ

ತೋಟದಂಚಿನ ಪಾಗಾರಕ್ಕೂ
ಸೀರೆಯ ಸೊಬಗಿನ
ವ್ಯಯಾರದ ಕಳೆ!

ಹಾಸುಗಲ್ಲಾಗಿ ಹರಿದಿದೆ
ಜಲಪಾತದ ತೆರದಲಿ
ನೀಲ್ಗಂದು ಪಾಚಿಯ ಹೊಳೆ!

ಹಿತ್ತಲ ಬುಡದಿ ಹೊಸ ಚಿಗುರು
ಸಾಲಂಕೃತ ಹಡೆಯುವ ಹಬ್ಬಕೆ
ಹದ ಹುಯಿಲೆಬ್ಬಿಸಿದೆ ಬೆಳೆ!


ಮದನ ಮಾನಿನಿ ಮುಡಿಪ
ಮಿರುಗುವ ಕಾಮನ ಬಣ್ಣದ
ಕುಮುದಿನಿ ಮೇಲಬ್ಬರದ ಮಳೆ!

ಎನ್.ಆರ್.ಗಜು, ಕುಮಟಾ

- NRGaju

18 Feb 2019, 02:03 pm
Download App from Playstore: