ಯೋಧ ನಿನಗೆ ನಮನ

"ಜೈ ಜವಾನ್"
ದೇಶಕ್ಕಾಗಿ ದುಡಿವ ಯೋಧ ನಿನಗೆ
ಕೋಟಿ ಕೋಟಿ ವಂದನೆ.
ಭಾರತಾಂಬೆಯ ಉಳಿವಿಗಾಗಿ ಪ್ರಾಣತ್ಯಾಗ ಮಾಡಲೊರಟು ಕೆಚ್ಚೆದೆಯಿಂದ ಹೋರಾಡುವ
ಯೋಧ ನಿನಗೆ ವಂದನೆ
"ಕೋಟಿ ಕೋಟಿ ವಂದನೆ"

ಹೆತ್ತು ಹೊತ್ತು ಬೆಳೆಸಿದವರ ಬಿಟ್ಟು
ಒಡ ಹುಟ್ಟಿದವರಿಗೆ ಎಲ್ಲಾ ಕೊಟ್ಟು
ಹೆಂಡತಿಗೆ ಸ್ವಲ್ಪ ಪ್ರೀತಿ ಕೊಟ್ಟು
ಅಸುಗೂಸನ್ನ ಮಡದಿಯ ಮಡಿಲಿಗೆ ಇಟ್ಟು ದೇಶದ ಉಳಿವಿಗೆ ಪಣವ ತೊಟ್ಟು
ಪ್ರಾಣದ ಹಂಗನ್ನು ಬಿಟ್ಟು ಹೋರಾಡುವ ಯೋಧ ನಿನಗೆ ಕೋಟಿ ಕೋಟಿ ವಂದನೆ.

ಹೆತ್ತವ್ವನ ಕೈ ತುತ್ತ ಬಿಟ್ಟು, ಮಡದಿಯ ಪ್ರೀತಿ ಮಮತೆಯ ಊಟ ಬಿಟ್ಟು ರಾತ್ರಿ ಹಗಲೆನ್ನದೆ ನಿದ್ರೆ ಬಿಟ್ಟು ಶ್ರಮ ಪಟ್ಟು ಭಾರತಾಂಬೆಯ ಕೊಟ್ಯಾಂತರ ಮಕ್ಕಳಿಗೆ ರಕ್ಷಣೆ ಕೊಡುವ ಯೋಧ ನಿನಗೆ
"ಕೋಟಿ ಕೋಟಿ ವಂದನೆ"

✍ರಾಜ್

- ರಾಜ್

19 Feb 2019, 08:35 am
Download App from Playstore: