ಹತ್ತರ ಪ್ರೀತಿಯ ಮಕ್ಕಳೇ

ಹತ್ತರ ಪ್ರೀತಿಯ ಮಕ್ಕಳೇ
ಹತ್ತಿರ ಬಂತು ಪರೀಕ್ಷೆ
ದೂರ ತಳ್ಳಿಬಿಡಿ ಹೆದರಿಕೆ
ಧೈರ್ಯ ತುಂಬಿಕೊಳ್ಳಿ ಹೃದಯಕೆ..
ಹತ್ತರ ಪ್ರೀತಿಯ ಮಕ್ಕಳೇ
ಪರೀಕ್ಷೆ ಒಂದು ಹಬ್ಬದಂತೆ
ಓದುಬರಹವೇ ಪೂಜಿಸುವ ದೇವರುಗಳು
ವಿಷಯಗಳೇ ಹಬ್ಬದ ಸಾಮಾನುಗಳು
ಪ್ರಶ್ನೋತ್ತರಗಳೇ ಹಬ್ಬದ ಅಡುಗೆಗಳು
ಸಂಭ್ರಮದಿಂದ ಸಿದ್ಧಗೊಳ್ಳಿ ನೀವುಗಳು..

ಅನ್ನಬೇಡಿ ಗಣಿತ ಕಷ್ಟ ಅಂತ
ಏಕೆಂದರೆ ಸೊನ್ನೆ ಕಂಡುಹಿಡಿದಿದ್ದೇ ಭಾರತ..
ಹೋಗದಿರಲಿ ಸುತ್ತಮುತ್ತ
ಲೆಕ್ಕ ಮಾಡುವಾಗ ನಿಮ್ಮ ಚಿತ್ತ..
ಆಗ ನೋಡಿ ಗಣಿತ
ಎಲ್ಲಕ್ಕಿಂತ ಸುಲಲಿತ..

ಅಯ್ಯೋ ವಿಜ್ಞಾನ
ಪ್ರಶ್ನೆಗಳು ವಿಭಿನ್ನ
ತಿನ್ನುತ್ತವೆ ತಲೆಯನ್ನ
ಅನ್ನಬೇಡಿ ಮಕ್ಕಳೇ..
ಪುಟಪುಟ ತುಂಬಿಸಿ ಚಿತ್ರಗಳನ್ನ
ಪ್ರಯೋಗ ಮಾಡಿ ದಿನ ದಿನ
ಚರ್ಚೆ ಮಾಡಿ ಅನುಕ್ಷಣ
ಆಗ ನೋಡಿ ವಿಜ್ಞಾನ
ನಿಮ್ಮ ಮನದೊಳಗೆ ಸಂಪೂರ್ಣ ಜೀರ್ಣ....

ಎಲ್ಲರು ಹೇಳುವಂತೆ ಸಮಾಜ
ಅತಿ ಸರಳ ಸುಲಭ ನಿಜ
ಹಾಗಂತ ಸಮಾಜಕ್ಕೆ ಹಾಕಿದರೆ ರಜಾ
ನಿಮಗೆ ಸಿಗೋದಿಲ್ಲ ಡಿಸ್ಟಿಂಕ್ಷನ್ನಿನ ಮಜಾ....

ಪದ್ಯಗದ್ಯ ವ್ಯಾಕರಣ ಪತ್ರಲೇಖನ ಒಳಗೊಂಡ
ಭಾಷೆಗಳಾದ ಹಿಂದಿ ಇಂಗ್ಲೀಷ್ ಕನ್ನಡ
ಕಲಿತರೆ ಸುಲಭವಾಗಿ ಅಂಕಗಳು ನಿಮ್ಮ ಸಂಗಡ...

ಎಷ್ಟು ಓದುತ್ತೀರೋ
ಅಷ್ಟು ಓಳ್ಳೇಯದು
ಎಷ್ಟು ಬರೆಯುತ್ತೀರೋ
ಅಷ್ಟು ಮರೆಯದು....
ಎಷ್ಟು ಲೆಕ್ಕ ಬಿಡಿಸುತ್ತೀರೋ
ಅಷ್ಟು ಪಕ್ಕ ಆಗುತ್ತೀರಾ
ಎಷ್ಟು ಚೊಕ್ಕ ಚಿತ್ರ ರಚಿಸುತ್ತೀರೋ
ಅಷ್ಟು ಅಂಕ ಪೂರ ಗಳಿಸುತ್ತೀರಾ...

ಹೇಳಿದ್ದನ್ನು ಮನೆಯಲಿ ಚೆನ್ನಾಗಿ
ಕಲಿತುಕೊಂಡು ಬನ್ನಿ
ಕಲಿತಿದ್ದನ್ನು ಶಾಲೆಯಲಿ ತುರ್ತಾಗಿ
ಬರೆದುಕೊಂಡು ತನ್ನಿ...

ಪರೀಕ್ಷಾ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ
ಪೌಷ್ಟಿಕ ಆಹಾರ ಸೇವಿಸಿ
ನಿರೀಕ್ಷಾ ಅಂಕ ಗಳಿಸುವುದಕ್ಕೆ ಶಿಕ್ಷಕರು
ಹೇಳಿದ ವೇಳಾಪಟ್ಟಿ ಅನುಸರಿಸಿ.....

ಪರೀಕ್ಷೆ ಮುಗಿಯುವತನಕ
ಟಿವಿ ಮೊಬೈಲ್ ನೋಡಬೇಡಿ..
ಪ್ರಶ್ನೋತ್ತರ ಕಲಿಯುವತನಕ
ಪೆನ್ನು ಪುಸ್ತಕ ಬಿಡಬೇಡಿ...
ನಿತ್ಯ ಆಟದ ಅಂಕಣಕ್ಕೆ ಭೇಟಿಕೊಡಬೇಡಿ
ಆಗ ಓಳ್ಳೇಯ ಅಂಕಪಟ್ಟಿ ನಿಮ್ಮದು ನೋಡಿ..

ಇಷ್ಟದ ಪ್ರಶ್ನೆಗಳಿಗೆ ಮೊದಲು ಆದ್ಯತೆ ನೀಡಿ
ಕಷ್ಟದ ಉತ್ತರಗಳಿಗೆ ಆಮೇಲೂ ಚಿಂತೆ ಮಾಡಿ...
ಎಲ್ಲ ಪ್ರಶ್ನೆಗಳನ್ನು ಅಟೆಂಡ್ ಮಾಡುವುದನ್ನು ಮರೆಯದಿರಿ
ನಿಮ್ಮ ಅಕ್ಷರಗಳನ್ನು ದುಂಡಾಗ್ ಬರೆಯುವುದನ್ನು
ತಪ್ಪದಿರಿ

ಹತ್ತರ ಪ್ರೀತಿಯ ಮಕ್ಕಳೇ
ಸದುಪಯೋಗಪಡಿಸಿಕೊಳ್ಳಿ ಇರುವ ವೇಳೆ
ಆಗ ನಿಮ್ಮದು ನೋಡಿ ಸುಂದರವಾದ ನಾಳೆ...
ಹತ್ತರ ಪ್ರೀತಿಯ ಮಕ್ಕಳೇ
ಎತ್ತರವಾಗಿ ಯೋಚಿಸಿರಿ
ಹೆಮ್ಮರದಂತೆ ಬಾಳಿರಿ.........

- ಸುರೇಶ್ ಟಿ ವಿ

21 Feb 2019, 11:17 am
Download App from Playstore: