ಯಾವ್ದುಕ್ಕೂ ತಲೆಕೆಡುಸ್ಕೋ ಬ್ಯಾಡ

ಯಾವ್ದುಕ್ಕೂ ತಲೆಕೆಡುಸ್ಕೋ ಬ್ಯಾಡ
ಏನ್ ಆಗುತ್ತೋ ಆಗ್ಲಿ ಬಿಡೋ..
ಇಡಿ ಲೋಕನೇ ತಲೆಕೆಳಗಾಗ್ಲಿ
ಇಷ್ಟ ಬಂದಂಗ್ ಇದ್ಬಿಡೋ..
ನಾವ್ ಇದ್ರೆನೇ ಜಗತ್ತು
ಹೊದ್ರೆ ಏನ್ ಬಂತು..
ನಮ್ಗೆ ನಾವೇ ಹೀರೋ ಅನ್ಕೊಬೇಕು
ನಮ್ಮ್ ಜೀವ್ನನಾ ನಾವೇ ಸೂಪರ್ ಮಾಡ್ಕೋಬೇಕು..
ಮನ್ಸಲ್ಲ್ ಪ್ರೀತಿ ಇರ್ಲಿ
ಮುಖ್ದಲ್ಲ್ ನಗು ಇರ್ಲಿ|| ಪ||

ಜೀವ್ನ ಒಂದು ಗಿರ್ಗಿಟ್ಲೆ
ಅವ್ನು ನಿಲ್ಸೋವರೆಗೂ ತಿರುಗ್ಲೇಬೇಕು
ಅವ್ನಿಗೆ ಇಷ್ಟಬಂದಂಗೆ ತಿರ್ಗ್ಸೋದು ಅವ್ನ್ ಕೆಲ್ಸ
ಹೆಂಗೆ ಬರುತ್ತೋ ಹಂಗೆ ಬದುಕೋದು ನಮ್ಮ್ ಸಂತೋಷ.....
ಹುಟ್ದಾಗ ಯಾರೇನು ಕಟ್ಕಂಡ್ ಬರಲ್ಲ
ಸತ್ತಾಗ ಯಾರನ್ನು ಮನೇಲಿ ಇಟ್ಕನಲ್ಲ..
ಹೊಟ್ಟೆ ಕಿಚ್ಚು ನಿನ್ನನ್ನು ಸ್ಮಶಾನಕ್ಕೆ ಸಾಗ್ಸುತ್ತೆ
ಪ್ರೀತಿ ಹಂಚು ನಿನ್ನನ್ನು ಜಮಾನ ನೆನೆಯುತ್ತೆ..

ಈ ಜೀವ್ನನೇ ಹಂಗೆ ನೂರೆಂಟು ರಿವರ್ಸ್ಗೇರು
ಅವ್ನು ಹೇಳ್ದಂಗೆ ಓಡುಸ್ಬೇಕು ನಮ್ಮ ತೇರು..
ಇಟ್ಟವ್ನೇ ಹಳ್ಳ ಗುಂಡಿ ನಮ್ಮ್ಗಳ ಬುದ್ಧಿ ಕಲಿಸೋಕೆ
ಹೋಗುವಾಗ ಅಕ್ಕಪಕ್ಕ ಅಕ್ಕರೆ ನೀಡೋ ಕಾಣಿಕೆ
ನಿಲ್ಲಿಸುವಾಗ ನಿನ್ಗೂ ಬರ್ಲಿ ಸ್ವಲ್ಪ ಪುಣ್ಯ ಲೆಕ್ಕಕ್ಕೆ
ಸುಳ್ಳು ಮೋಸ ಸುಳಿಯದಿರಲಿ ನಿನ್ನ ಪಯಣದಲಿ
ಸ್ನೇಹ ಎಂಬ ನಿಲ್ದಾಣ ಕಟ್ಟು ನಿನ್ನ ದಾರಿಯಲ್ಲಿ

- ಸುರೇಶ್ ಟಿ ವಿ

23 Feb 2019, 03:53 pm
Download App from Playstore: