ನಿನ್ನವಳು
ಯಾವ ಜನ್ಮದ ಪುಣ್ಯದ ಫಲವೋ ನಿನ್ನ ಪ್ರೀತಿಯ
ಆಸರೆ ಹೃದಯಕೆ,ಕಂಬನಿಯ ಉಳಿಸದಷ್ಟು, ನಗುವನ್ನು ಅಳಿಸದಷ್ಟು, ಕನಸುಗಳಿಗೆ ನಿಲುಕದಷ್ಟು, ಕಲ್ಪನೆಗೂ ಅರಿಯದಷ್ಟು ಪ್ರೀತಿಸುವೆ ಹುಡುಗ ನಿನ್ನನು.
ಒಲವಿನ ಓಲೆಗಳ ರಾಶಿ ತುಂಬಿ ಕಣ್ಣಲಿಟ್ಟಿರುವೆ ಸಮಯ ಸಿಕ್ಕಾಗಲೆಲ್ಲ ಓದಿ ಮುಗಿಸು, ಇನ್ನೂ ಉಳಿದಿವೆ ತುಟಿಯ ಅಂಚಲ್ಲಿ ಮಾತುಗಳಂತೆ ಮೌನವಾಗಿ ನಿನ್ನ ಸೇರಲು.
ಅರ್ಧಕ್ಕೆ ನಿಲ್ಲಿಸಿದ ಕವಿತೆಗಳ ಪೂರ್ಣ ರೂಪ ನೀನು,ನೆನ್ನೆಯ ಕನಸುಗಳಿಗೆ ನಾಳೆಯ ನನಸು ನೀನು,ಇರಲಿ ಒಂದಿಷ್ಟು ವಿರಹ ನಿನ್ನೆದೆಯಲಿ ಹುದುಗಿಹೋಗುವ ಮುನ್ನ ಸಿಹಿಯಾದ ನೋವಾಗಿ.
ನಿನ್ನ ತುಂಟ ಕಂಗಳು ಕಲಿಸುತ್ತಿರುವ ಒಲವ ಪಾಠಗಳು,ಬಾಯಿಗಿಡುವ ಮುನ್ನ ದೇವರಿಗಿಟ್ಟ ತುತ್ತುಗಳು,ಸವಿ ಸವಿದು ಕೊಡಬೇಕಿಸುತ್ತಿದೆ
ನಿನಗಾಗಿ ಬಚ್ಚಿಟ್ಟ ಮುತ್ತುಗಳು.
ಹೆಜ್ಜೆಗಳ ಎಣಿಸುತ್ತಾ ಗೆಜ್ಜೆ ಸದ್ದು ಮಾಡುತಿರಲು,
ಲಜ್ಜೆ ಇಲ್ಲದ ಮನಸು ನಿನ್ನ ಮನವ ಕದ್ದು ಮುದ್ದಾಡುತಿರಲು, ಸಿಕ್ಕು ಬಿಡು ಇಂದೊಮ್ಮೆ ಬಿಗಿದಪ್ಪಿಕೊಳ್ಳಲು.
❤️❤️❤️❤️❤️❤️
- ಚುಕ್ಕಿ
28 Feb 2019, 05:19 pm
Download App from Playstore: