ಪರೀಕ್ಷೆ ಬಂತು ಹತ್ತಿರ
ನನ್ನ ನೆಚ್ಚಿನ ಗುರುಗಳೇ
ಪರೀಕ್ಷೆ ಬಂತು ಹತ್ತಿರ
ಓದುವುದಿದೆ ಬೃಹತ್ ಸಾಗರ..
ಪ್ರಶ್ನೆಗಳಿವೆ ನೂರಾರು ಸಾವಿರ
ನೆನಪಿಗೆ ಬರುತ್ತಿಲ್ಲ ಉತ್ತರ..
ನನ್ನ ನೆಚ್ಚಿನ ಗುರುಗಳೇ
ಓದಲು ಪುಸ್ತಕ ತೆರೆದರೆ ತಲೆಯಲಿ ನೂರೆಂಟು ವಿಚಾರ
ಬರೆಯಲು ಪೆನ್ನು ಹಿಡಿದರೆ ಮನದಲಿ ಆಡುವ ಆಸೆ ಅಪಾರ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..|ಪ|
ಉತ್ತರಗಳು ನೋಡಿದರೆ ಮಾರುದ್ದ
ಲೆಕ್ಕಗಳೆಂದರೆ ನನಗೆ ವಿರುದ್ಧ..
ವಿಷಯದ ಅರ್ಥ ಅರ್ಧಂಬರ್ದ
ಗುರುಗಳು ಕಲಿಸೋಕೆ ಸದಾಸಿದ್ಧ
ನಾನು ಪಾಸಾಗೋಕೆ ಕಟಿಬದ್ಧ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಅನುಸರಿಸು ಮನೆಯಲಿ ಓದುವ ವೇಳಾಪಟ್ಟಿ
ಶಿಕ್ಷಕರು ಹೇಳುವರು ನಾಕೈದು ತಟ್ಟಿ..
ಓದಿದರೆ ನಾವ್ ಇವತ್ತು ಬೇಕಾಬಿಟ್ಟಿ
ನಾಳೆ ಫೇಲಾಗೋದು ಗ್ಯಾರಂಟಿ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ನೆಂಟರ ಮನೆಕಡೆ ತಿರುಗಿ ನೋಡಬೇಡ
ನೆಟ್ಟಗೆ ಶಾಲೆಗೆ ಬರೋದು ಮರಿಬೇಡ..
ಆಟ ಆಡುವುದಕ್ಕಂತೂ ಹೋಗಲೇ ಬೇಡ
ಹೋಂವರ್ಕ್ ಬರೆಯುವುದನ್ನು ತಪ್ಪಿಸಲೇ ಬೇಡ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಟಿವಿ ಮೊಬೈಲ್ ನೋಡುವುದು ಮರೆತು ಬಿಡು
ಉತ್ತರ ಹತ್ತುಸಲ ಬರೆದು ಕಲಿತು ಬಿಡು..
ಆರೋಗ್ಯದ ಕಡೆ ಹೆಚ್ಚು ಒತ್ತು ನೀಡು
ಬೆಳಿಗ್ಗೆ ಬೇಗ ಎದ್ದು ಓದಲು ಕುಂತು ಬಿಡು..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಓದಲೇಬೇಕು ಇಲ್ಲಾಂದ್ರೆ ಬಿಡಲ್ಲ ಈಜನ
ಬರ್ತಾವೆ ನೂರಾಒಂದು ಬೈಗುಳ ಪ್ರತಿದಿನ..
ಅದಕ್ಕೆ ಪಾಸ್ ಆದ್ರೆ ಸಮಾಧಾನ
ಏನಾದ್ರೂ ಫೇಲಾದ್ರೆ ಅವಮಾನ
ಫಸ್ಟ್ ಬಂದ್ರೆ ಬಹುಮಾನ
ನನಗೂ ಬೇಕು ಒಂದು ಸ್ಥಾನಮಾನ
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಅನುಭವಿಸಿದವರು ಅರಿತು ಹೇಳುವರು
ಕೈಕೆಸರಾದರೆ ಬಾಯಿ ಮೊಸರು..
ವಿವೇಕರು ಸಂದೇಶ ಸಾರುವರು
ಏಳುಎದ್ದೇಳು ಗುರಿ ಮಟ್ಟುವ ತನಕ ನಿಲ್ಲದಿರು..
ಹೆತ್ತವರು ಬುದ್ಧಿಮಾತು ಹೇಳುವರು
ಈಗ ಕಷ್ಟಪಟ್ಟವರು ಮುಂದೆ ಸುಖವಾಗಿರುವರು..
ಶತೃಗಳು ದ್ವೇಷದಿಂದ ಹೇಳುವರು
ನಿನ್ನ ಕೈಯಲ್ಲಿ ಆಗಲ್ಲ ನೋಡ್ತಾ ಇರು..
ಗೆಳೆಯರು ಧೈರ್ಯದಿಂದ ಹೇಳುವರು
ಏನೇ ಆಗಲಿ ನಾವ್ ಇರ್ತಿವಿ ಮಾಡು ಗುರು..
ನಿಲ್ಲೋದಿಲ್ಲ ಎಂದು ಈ ಜಗದ ಕಾಲ ಚಕ್ರ
ಬಿಡೋದಿಲ್ಲ ನಿನ್ನ ಏಳುಬೀಳಿನ ಈ ಜೀವನಚಕ್ರ..
ನಿಲ್ಲದೆ ಅಳುಕದೆ ಈಜು ವಿದ್ಯೆಯ ಸಮುದ್ರ
ತಪ್ಪದೆ ಸೇರುವೆ ನೀನು ಗೆಲುವಿನ ತೀರ..
- ಸುರೇಶ್ ಟಿ ವಿ
28 Feb 2019, 08:58 pm
Download App from Playstore: