ಅನಿಕೇತನ
ಅನಿಕೇತನ ನೀನಾಗು
ನನ್ನ ಪಾಲಿನ ಚೇತನ
ಬೆಳಗಲಿ ನಿನ್ನಿಂದ ನನ್ನ ಜೀವನ
ಮರೆಯಲಾಗದ
ಅನುಭವ ನೀನಿತ್ತೆ
ತೊರೆಯಲಾಗದ
ಬಾಂದವ್ಯ ನೀ ಬೆಸೆದೆ
ನಾನೆಂದು ನಿನ್ನ ನೆನೆವೆ
ಕಲಿಕೆಗೆ ಸಹಕರಿಸಿ
ತಪ್ಪುಗಳ ಸರಿಪಡಿಸಿ
ಮಮತೆಯಲಿ ಬೆಳೆಸಿ
ಸರಿದಾರಿಯಲಿ ನಡೆಸಿದೆ
ನಾನೆಂದು ನಿನ್ನ ನೆನೆವೆ
ನಿನ್ನಲ್ಲೆ ನಾನಿರುವೆ
ಎಂದೆಂದೂ ಒಂದಾಗಿರುವೆ
ನೀ ಮೌಲ್ಯಗಳ ಬೆಳೆಸಿರುವೆ
ಇದೋ ನಾನಿನಗೆ ನಮಿಸುವೆ
ನಾನೆಂದು ನಿನ್ನ ಮರೆಯೆ
ಶಾರದ
- ಶಕುಂತಲಾ
01 Mar 2019, 09:19 am
Download App from Playstore: