ಮೂರು ಬಣ್ಣವನು ಎತ್ತಿ ಹಿಡಿಯಲು

ಮೂರು ಬಣ್ಣವನು ಎತ್ತಿ ಹಿಡಿಯಲು
ನೆತ್ತರು ಹರಿಸಿದ ಮಹನಿಯರೇ!!
ಮಡಿದರೂ ಮಿಡಿಯುವ ದೇಶಪ್ರೇಮದ
ಕಿಚ್ಚಿನ ನಡುವಲಿ ನಡೆದವರೇ!!

ನೀಲಿಯ ಬಣ್ಣದ ಶೌರ್ಯ ಚಕ್ರದ
ನಡುವಲಿ ಜನಿಸಿ ಬಂದವರೇ!!
ನಾಲ್ಕು ದಿಕ್ಕಿನಲಿ‌ ಸಿಂಹದಂತೆಯೇ
ಕಾದು ಘರ್ಜಿಸಿಹ ರಕ್ಷಕರೇ!!

ರಾಷ್ಟ್ರಗೀತೆಯಲಿ ದೇಷ ಪ್ರೇಮದ
ಉಸಿರನು ಹೊತ್ತ ನಾಯಕರೇ!!
ಬೇಧ ಭಾವವ ಕಾಣಲಾರದೇ
ಈ ದೇಷವ ಕಾಯುವ ಸಹೋದರರೇ!!

ನಿಮ್ಮ ಶಕ್ತಿಯಲಿ ನಿಮ್ಮ ಯುಕ್ತಿಯಲಿ
ಗೆಲುವದು ನೆಲೆಸಲಿ ಧೀರಜರೇ!!
ಸೋಲನು ದಹಿಸುವ ಕೀರ್ತಿ ಪತಾಕೆ
ಮುಗಿಲನು ಮುಟ್ಟಲಿ ಸೈನಿಕರೇ!!

- ಪಿ.ಜಿ.ಜ್ಯೋತಿ

01 Mar 2019, 12:35 pm
Download App from Playstore: