ಬಿಳಿ ತಾವರೆಗಳು
ಅಮ್ಮ ಎಲ್ಲಿ ಅಪ್ಪ ಎಲ್ಲಿ!
ಬಿಳಿ ತಾವರೆಗಳು ಕೊಲೆ ಆಯಿತೇ ಇಲ್ಲಿ ,ಹೃದಯಗಳು ನುಚ್ಚು ನೂರಾಗಿ ಬಿದ್ದಿವೆ
ರಕ್ತದ ಮಡಿಲಲ್ಲಿ!!
ಯಾರ ಬಂಧುಗಳು ಇವರು, ಯಾರ ಶತ್ರುಗಳು ಅವರು, ಬಂದೂಕುಗಳ ಹಿಡಿದು ತಲೆಗಳ ಕಡಿದು,ಬಿಸಾಡಿಹರು ಮೂಲೆ ಮೂಲೆಗಳಲ್ಲಿ ಯುದ್ಧವೆಂದು ಹೇಳಿ ಪುಟ್ಟ ಕಂದಮ್ಮನ ಬಿಟ್ಟು ಆಕ್ರಂದನದಲ್ಲಿ!!
ಯಾರಿಗಾಗಿ ಹೊಡೆದಾಟ ಯಾರಿಗಾಗಿ ಜೀವ ತೆಗೆಯುವ ಚಟ, ಮಣ್ಣಿಗೋ ಅದರಲ್ಲಿನ ಹೊನ್ನಿಗೋ!!
ಮಣ್ಣಲ್ಲಿ ಮಣ್ಣಾಗಿ ಹೋಗುವ ಜೀವಕೆ ಇನ್ನೊಂದು ಜೀವ ತೆಗೆಯುವ ಪಾಪವೇತಕೆ? ಎಲ್ಲರಂತೆ ಉಸಿರಾಡುವ ಯೋಧರ ಸಾವು ಏತಕೆ?
ಇನ್ನಾದರೂ ಸುಮ್ಮನಾಗಲಿ
ಸ್ವಲ್ಪವಾದರೂ ಶಾಂತವಾಗಲಿ
ಕಟ್ಟುಸಿರು ಕಣ್ಮರೆಯಾಗಲಿ
ನಿಟ್ಟುಸಿರು ನೆಮ್ಮದಿಯಾಗಲಿ
ನೊಂದ ಮನಗಳ ಆಕ್ರಂದನ ಸಡಿಲವಾಗಲಿ.
- ಚುಕ್ಕಿ
01 Mar 2019, 09:17 pm
Download App from Playstore: