ಯೋಧ ಯೋಧ ಯೋಧ
ಯೋಧ ಯೋಧ ಯೋಧ
ನೀನೇ ದೇಶದ ಕೆಚ್ಚೆದೆಯ ಕಂದ...
ನಿನ್ನ ವೀರ ದೇಶಾಭಿಮಾನದಿಂದ
ನಾವೆಲ್ಲರು ಚಿರಕಾಲ ಆನಂದ....
ನಿನ್ನ ತ್ಯಾಗ ಬಲಿದಾನದಿಂದ
ಮೆರೆದಾಡುವುದು ತ್ರಿವರ್ಣ ಧ್ವಜ ಹೆಮ್ಮೆಯಿಂದ...
ನಿನಗೆ ಕೋಟಿ ಕೋಟಿ ನಮನ
ನಿನ್ನ ಹೆಸರು ಎಂದೆಂದೂ ಮನನ||ಪ||
ನಾನು ನನ್ನದು ಎಂಬ ಮೋಹ ದೂರ
ತನುಮನ ದೇಶಪ್ರೇಮ ಸಾಗರ...
ದೇಶದ ರಕ್ಷಣೆ ಅಂದುಕೊಂಡೆ ತಂದೆ ತಾಯಿ
ರಾಷ್ಟ್ರದ ಐಕ್ಯತೆ ನಿನಗಾಯಿತು ಬಂಧುಬಳಗ...
ಘೋರ ಕದನಕೂ ಸೈ, ವೀರ ಮರಣಕೂ ಸೈ
ಭರತ ಭೂಮಿಗೆ ಬರೆದೆ ನಿನ್ನ ಭವಿಷ್ಯ
ದೇಶಾನೇ ಮುಖ್ಯ ದೇಶಾನೇ ನಿತ್ಯ.....
ಚಳಿ ಬಿಸಿಲು ಎಷ್ಟೇ ಇದ್ದರೇನು
ಛಲ ಬಿಡದ ಎಂಟೆದೆಯ ಬಂಟ ನೀನು...
ಮದ್ದುಗುಂಡು ಸಿಡಿದು ಬಂದರೇನು
ದಂಗು ಬಡಿಸುವ ಧೈರ್ಯಶಾಲಿ ನೀನು..
ದೇಹ ತುಂಡಾದರೂ ನಿನಗಿಲ್ಲ ಲೆಕ್ಕ
ದ್ರೋಹಿಗಳ ದಂಡು ನಾಶವಾಗುವ ತನಕ
ವಿಜಯ ಪತಾಕೆ ಹಾರುವ ತನಕ
- suresh
03 Mar 2019, 10:07 pm
Download App from Playstore: