ಮಳೆಯ ಮೋಡವೆ
ಮಳೆಯ ಮೋಡವೆ
ಮುನಿದು ನೀ
ಸರಿಯದಿರು ದೂರ
ನಿನ್ನ ಹನಿ ಸಿಂಚನವೇ
ಕಳೆವುದು ಮನ ಭಾರ
ಒಂದೆರಡು ಹನಿಯಾದರೂ
ಚಿಮುಕಿಸಿ ಎದೆಯ
ಹಸಿರನುಳಿಸು ಬಾರ..
ಬೆಂಗಾಡು ನನ್ನೆದೆಯು
ವಿರಹದಾ ಉರಿ ಬಿಸಿಲಿಗೆ
ತಾನಾಗಿ ಹೊತ್ತಿ
ಉರಿದಿಹುದು ಮೆಲ್ಲಗೆ..
ಬೆಂಕಿ ಆರಿಸುವರಿಲ್ಲ
ಸುಟ್ಟು ಕಮರುತಿಹ
ಮನಸಿಗೆ ಕಿಂಚಿತ್ತು ನೆದರಿಲ್ಲ..
ಬಿರುಗಾಳಿ ನೆವಕೆ ನೀ
ಬಿಟ್ಟು ಓಡಿದೆಯಲ್ಲ
ಸುಳಿಗಾಳಿಯಲಿ ಸಿಲುಕಿ
ನಾ ಸುರುಟಿ ಸೊರಗಿದೆನಲ್ಲ..
- ಶ್ರೀಗೋ.
07 Mar 2019, 05:28 am
Download App from Playstore: